ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಯ ರೊಚ್ಚು; ಕೆಂಪುಕೋಟೆಗೆ ನುಗ್ಗಿದ ಉದ್ರಿಕ್ತ ಗುಂಪು

ದೆಹಲಿ: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ರೈತರ ಪ್ರತಿಭಟನೆ ಗಣರಾಜ್ಯ ದಿನವಾದ ಇಂದು ಉಗ್ರ ಸ್ವರೂಪ ತಾಳಿತು. ಈ ವರೆಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಗಳು ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರಾಕ್ಟರ್ ಪೆರೇಡ್ ನಡೆಸುವುದಾಗಿ ಹೇಳಿಕೊಂಡಿದ್ದರು. ಶಾಂತಿಯುತ ಪ್ರತಿಭಟನೆ ನಡೆಸುವುದಾಗೊ ಸರ್ಕಾರದ ಮುಂದೆ ಹೇಳಿಕೊಂಡಿದ್ದ ಸಂಘಟನೆಗಳು ಅಬುಮತಿಯನ್ನೂ ಕೇಳಿತ್ತು. ಆದರೆ ದೆಹಲಿಯಲ್ಲಿ ನಡೆದದ್ದೇ ಬೇರೆ.

ಹೋರಾಟಗಾರರು ಮುಖ್ಯ ರಸ್ತೆಗಳಲ್ಲಿ ಸೀಮಿತವಾಗಬೇಕಿದ್ದ ಈ ಹೋರಾಟ ತನ್ನ ದಿಕ್ಕನ್ನೇ ಬದಲಿಸಿದೆ. ಏಕಾಏಕಿ ಉದ್ರಿಕ್ತರ ಗುಂಪು ಐತಿಹಾಸಿಕ ತಾಣ ಕೆಂಪುಕೋಟೆಗೆ ನುಗ್ಗಿತು.

ಕೆಂಪುಕೋಟೆ ಹೈ ಸೆಕ್ಯೂರಿಟಿ ಇರುವ ಸ್ಥಳ. ಇಂದಿನ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಕೆಂಪುಕೋಟೆಗೆ ಸುಮಾರು ಐದು ಸುತ್ತುಗಳ ಭದ್ರತೆಯೊಂದಿಗೆ ಪೊಲೀಸರು ಭದ್ರತೆಯ ಚಕ್ರವ್ಯೂಹವನ್ನೇ ನಿರ್ಮಿಸಿದ್ದರು. ಈ ಭದ್ರತೆಯನ್ನೇ ಬೇಧಿಸಿ ಹೋರಾಟಗಾರರ ಜೊತೆಗಿದ್ದ ಗುಂಪು ಕೆಂಪುಕೋಟೆಗೆ ನುಗ್ಗಿ ಘೋಷಣೆ ಕೂಗಿತು. ಪ್ರತ್ಯೇಕ-ಪ್ರತಯೇಕ ಧ್ವಜಗಳನ್ನು ಹಾರಿಸಿ ಸರ್ಕಾರದ ವಿರುದ್ದ ಈ ಗುಂಪು ಪ್ರದರ್ಶನ ಮಾಡಿದೆ.

ಈವರೆಗೂ ಶಾಂತಿಯುತವಾಗಿ ನಡೆದಿದ್ದ ಪ್ರತಿಭಟನೆ ಇಂದು ಈ ರೀತಿಯ ಸ್ವರೂಪ ಪಡೆದಿರುವ ಬಗ್ಗೆ ಪೊಲೀಸರು ಊಡಾ ಅನೇಕಾನೇಕ ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ. ಇಡೀ ದಿನದ ಈ ಪ್ರತಿಭಟನೆಯಿಂದಾದ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಹಾಗೂ ಭದ್ರತಾ ಸಿಬ್ವಂದಿ ಹರಸಾಹಸ ಪಡಬೇಕಾಯಿತು.

Related posts