ಹೆಣ್ಣು ಮರಿಗೆ ಜನ್ಮ ನೀಡಿದ ಧರ್ಮಸ್ಥಳ ಕ್ಷೇತ್ರದ ಗಜರಾಣಿ ಲಕ್ಷ್ಮೀ

ಮಂಗಳೂರು: ದಕ್ಷಿಣ ಭಾರತದ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಗಜ ರಾಣಿ ಲಕ್ಷ್ಮೀ ಗುಡ್ ನ್ಯೂಸ್ ನೀಡಿದ್ದಾಳೆ. ಈ ಆನೆ ಇಂದು ಮುಂಜಾನೆ ಹೆಣ್ಣು ಮರಿಗೆ ಜನ್ಮ ನೀಡಿದೆ.

ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರ ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳಲ್ಲೊಂದು. ಈ ಕ್ಷೇತ್ರದ ಮಹಿಮೆ ಜಗತ್ತಿನ ಉದ್ದಗಲಕ್ಕೂ ಚಾಚಿದ್ದು ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದೆ. ಕೆಲ ಸಮಯದ ಹಿಂದೆ ಸಚಿವ ಆನಂದ್ ಸಿಂಗ್ ಅವರು ಧರ್ಮಸ್ಥಳ ದೇಗುಲಕ್ಕೆ ಈ ಆನೆಯನ್ನು ಸರ್ಪಿಸಿದ್ದರು.

ಈ ಆನೆ ಈ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಕುತೂಹಲದ ಕೇಂದ್ರಬಿಂದುವಾಗಿದೆ. ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಸಹಿತ ಕ್ಷೇತ್ರದ ಸಿಬ್ಬಂದಿ ಪಾಲಿಗೂ ಈ ಲಕ್ಷ್ಮೀ ಪ್ರೀತಿ ಪಾತ್ರವಾಗಿತ್ತು. ಇಂದು ಲಕ್ಷ್ಮೀ ಹೆಣ್ಣು ಮರಿಗೆ ಜನ್ಮ ನೀಡಿದ್ದಾಳೆ.

Related posts