ಬಲಾಡ್ಯರ ಒತ್ತುವರಿಗೆ ಮುಖ್ಯ ರಸ್ತೆ  ಬಲಿ; ಜೆಸಿಬಿಯಿಂದ ಆಗೆದು ಮಾರ್ಗಕ್ಕೆ ಹಾನಿ

ಬೆಂಗಳೂರು: ದೊಡ್ಡಬಳ್ಳಾಪುರ ಸಮೀಪದ ಗ್ರಾಮದ ಮಧ್ಯ ಭಾಗದಲ್ಲಿ ಹಾದು ಹೋಗಿರುವ  ರಸ್ತೆ  ಬಲಾಡ್ಯರಿಂದ ಒತ್ತುವರಿಯಾಗಿದ್ದು, ರಸ್ತೆಯನ್ನು ಜೆಸಿಬಿಯಿಂದ ಆಗೆದು ಹಾಳು ಮಾಡಲಾಗಿದೆ. ಇದರಿಂದ ಗ್ರಾಮದ ರಸ್ತೆ  ಬಂದ್ ಆಗಿದ್ದು  ವಾಹನಗಳ  ಓಡಾಟಕ್ಕೆ  ತೊಂದರೆಯಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಹೊನ್ನಘಟ್ಟ ಗ್ರಾಮದಲ್ಲಿ ಹೊನ್ನಘಟ್ಟ  ಮತ್ತು ಕೊಳೂರು ಗ್ರಾಮಕ್ಕೆ  ಸಂಪರ್ಕಿಸುವ ರಸ್ತೆ  ಕಾಮಾಗಾರಿ ಶುರುವಾಗಿತ್ತು. ರಸ್ತೆಗೆ ಜಲ್ಲಿ ಹಾಸು  ಹಾಕಲಾಗಿದ್ದು ಕೆಲವೇ ದಿನಗಳಲ್ಲಿ ರಸ್ತೆ ಡಾಂಬರೀಕರಣ ಆಗಬೇಕಿತ್ತು, ಆದರೆ ಗ್ರಾಮದ ಬಲಾಡ್ಯರು ರಸ್ತೆಯ ಒಂದು ಬದಿಯನ್ನ ಒತ್ತುವರಿ ಮಾಡಿದ್ದಾರೆನ್ನಲಾಗಿದ್ದು, ಇದರಿಂದ ರಸ್ತೆಯು  ಮತ್ತೊಂದು ಬದಿಯ ಸಾಗುವಳಿ ಜಾಗವನ್ನು ಅಕ್ರಮಿಸಿಕೊಂಡಿದೆ. ಜಮೀನು ಕಳೆದುಕೊಳ್ಳುವ ಭಯದಲ್ಲಿರುವವರು ರಸ್ತೆಯಲ್ಲಿ ಕಲ್ಲಿನ ಕುಚಗಳನ್ನ ನಿರ್ಮಾಣ ಮಾಡಿ ತಮ್ಮ  ಜಾಗ ಗುರುತಿಸಿ ಕೊಂಡಿದ್ದಾರೆ,

ಹೊನ್ನಘಟ್ಟ ಗ್ರಾಮದ ಸರ್ಕಾರಿ ಶಾಲೆಯಿಂದ ಕೊಳೂರು ರಸ್ತೆಯವರೆಗೂ ರಸ್ತೆ ಜಾಗವನ್ನು  ರಾಜಕೀಯ ಪ್ರಭಾವ ಬಳಸಿಕೊಂಡು ಒತ್ತುವರಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕಡೇಯವರು ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಕಳೆದ 12 ವರ್ಷಗಳಿಂದ ಇದೇ ವಿಚಾರಕ್ಕೆ  ಎರಡು ಬದಿಯವರಿಗೂ ರಸ್ತೆ  ವಿಚಾರಕ್ಕೆ ಜಗಳವೂ ಆಗಿದೆ. ಸದ್ಯ ಹೊನ್ನಘಟ್ಟ ಗ್ರಾಮದಿಂದ ಕೊಳೂರು ಗ್ರಾಮಕ್ಕೆ  ರಸ್ತೆ  ಕಾಮಾಗಾರಿ ನಡೆಯುತ್ತಿದ್ದು, ರಸ್ತೆಯನ್ನು ಜೆಸಿಬಿಯಿಂದ ಆಗೆದು ಹಾಳು ಮಾಡಲಾಗಿದೆ. ಇದರಿಂದಾಗಿ ರಸ್ತೆ ಬಂದ್  ಆಗಿದ್ದು ವಾಹನಗಳ  ಓಡಾಟಕ್ಕೆ ತೊಂದರೆಯಾಗಿದೆ.

ಸ್ಥಳಕ್ಕೆ  ದೊಡ್ಡಬಳ್ಳಾಪುರ  ತಹಶೀಲ್ದಾರ್  ಶಿವರಾಜ್  ಮತ್ತು ದೊಡ್ಡಬಳ್ಳಾಪುರ  ಗ್ರಾಮಾಂತರ  ಪೊಲೀಸರು  ಭೀತಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಬಹಳ ವರ್ಷಗಳಿಂದ ಸಾರ್ವಜನಿಕ  ರಸ್ತೆಯನ್ನಾಗಿ ಬಳಕೆ  ಮಾಡಲಾಗುತ್ತಿದೆ, ಇದೇ ಸ್ಥಳದಲ್ಲಿ ಗುಂಡುತೋಪು ಮತ್ತು ಬಿ ಖಾರಪ್  ಇದ್ದು, ರಸ್ತೆ  ನಿರ್ಮಾಣಕ್ಕೆ ಈ ಜಾಗವನ್ನು ಬಳಸಲಾಗುವುದು ಎಂದು ತಹಸೀಲ್ದಾರರು ತಿಳಿಯಿದ್ದಾರೆ. ರಸ್ತೆಯನ್ನ  ಹಾಳು ಮಾಡಿದವರ  ವಿರುದ್ದ  ಎಫ್ ಐಆರ್  ದಾಖಲಾಗಿದೆ, ಸರ್ವೆ ಅಧಿಕಾರಿಗಳು ಸರ್ಕಾರಿ  ಜಾಗವನ್ನು ಗುರುತಿಸಿ  ರಸ್ತೆ  ಸಮಸ್ಯೆ  ಬಗ್ಗೆ  ಹರಿಸುವುದ್ದಾಗಿ ತಹಶೀಲ್ದಾರ್ ತಹಶೀಲ್ದಾರ್ ಹೇಳಿದ್ದಾರೆ.

ರಸ್ತೆ ಒತ್ತುವರಿಯಿಂದ ಜಮೀನು ಕಳೆದುಕೊಂಡಿರುವ ರೈತ ಕುಟುಂಬ ತಮ್ಮ  ಜಾಗವನ್ನು ಗುರುತಿಸಿ ಕಲ್ಲಿನ ಕೂಚಗಳನ್ನು ನೆಟ್ಟಿದ್ದಾರೆ. ಇನ್ನೊಂದೆಡೆ ರಸ್ತೆಯನ್ನು ಗುತ್ತಿಗೆದಾರರ ಜೆಸಿಬಿಯಿಂದ ಆಗೆದು ಹಾಲು ಮಾಡಿದ್ದಾರೆ. ಇದರಿಂದಾಗಿ ಸಾರ್ವಜನಿಕರು ತೊಂದರೆಗೀಡಾಗಿದ್ದಾರೆ.

Related posts