ಡ್ರಗ್ಸ್ ಕೇಸ್; ದೀಪಿಕಾ ಪಡುಕೋಣೆ ಸಹಿತ ಅನೇಕ ಬಾಲಿವುಡ್ ಬೆಡಗಿಯರಿಗೆ ಸಮನ್ಸ್

ಮುಂಬೈ: ಡ್ರಗ್ ನಶೆಯಲ್ಲಿರುವ ಚಿತ್ರರಂಗದ ಮತ್ತಷ್ಟು ತಾರೆಯರಿಗೆ ಸಂಕಷ್ಟ ಶುರುವಾಗಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್’ರನ್ನು ಎನ್‌ಸಿಬಿ ವಿಚಾರಣೆಗೆ ಗುರಿಪಡಿಸಲಿದೆ. ಈ ಸಂಬಂಧ ಈ ಬೆಡಗಿಯರಿಗೆ ಎನ್‌ಸಿಬಿ ಸಮನ್ಸ್ ನೀಡಿದೆ. ಇವರಷ್ಟೇ ಅಲ್ಲ, ರಕುಲ್ ಪ್ರೀತ್ ಸಿಂಗ್ ಮತ್ತು ಸಾರಾ ಅಲಿ ಖಾನ್ ಗೆ ಎನ್‌ಸಿಬಿ ಸಮನ್ಸ್ ನೀಡಿದೆ.

ಬಂಧಿತ ರಿಯಾ ಚಕ್ರವರ್ತಿ ಹೇಳಿಕೆಯನ್ನಾಧರಿಸಿ ನಟಿಯರಿಗೆ ಎನ್‌ಸಿಬಿ ಸಮನ್ಸ್ ನೀಡಿದೆ. ಸೆಪ್ಟೆಂಬರ್ 24ಕ್ಕೆ ಫ್ಯಾಶನ್ ಡಿಸೈನರ್ ಸಿಮೋನ್ ಖಂಬಟ್ಟಾ, ನಟಿ ರಕುಲ್ ಪ್ರೀತ್ ಸಿಂಗ್, ಸೆ. 25ರಂದು ದೀಪಿಕಾ ಪಡುಕೋಣೆ, ಹಾಗೂ ಸೆ. 26ಕ್ಕೆ ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್ ವಿಚಾರಣೆಗೆ ಹಾಜರಾಗುವಂತೆ ಎನ್‌ಸಿಬಿ ಸಮನ್ಸ್ ನೀಡಿದೆ.

Related posts