ಡ್ರಗ್ಸ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ; ಸಿಎಂಗೆ ನಟಿ ತಾರಾ ಮನವಿ

ಬೆಂಗಳೂರು: ಮಾದಕ ವಸ್ತು ನಿಯಂತ್ರಣ ಮತ್ತು ಡ್ರಗ್ಸ್ ಮಾರಟಜಾಲದ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯೆ, ಖ್ಯಾತ ಕನ್ನಡ ಚಲನಚಿತ್ರ ನಟಿ ತಾರ ಆನುರಾಧ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಾದಕ ವಸ್ತು ಜಾಲದ ಬಗ್ಗೆ ವ್ಯಸನಿಗಳ ಬಗ್ಗೆ ಚಲನಚಿತ್ರ ರಂಗದಲ್ಲಿ ಹರುಡುತ್ತಿರುವ ಸುದ್ದಿ ನೋಡಿದರೆ ಅತಂಕವಾಗುತ್ತದೆ . ನಾನು ಚಲನಚಿತ್ರ ರಂಗದಲ್ಲಿ ಮೂರು ದಶಕಗಳಿಂದ ನೋಡಿದ್ದೇನೆ ಅದರೆ ಇಂತಹ ಘಟನೆ ನಾನು ನೋಡಿಲ್ಲ ಎಂದವರು ಹೇಳಿದ್ದಾರೆ.

ಚಲನಚಿತ್ರ ರಂಗವನ್ನು ಸಾರ್ವಜನಿಕರು ಹತ್ತಿರದಿಂದ ನೋಡುತ್ತಾರೆ. ಚಲನಚಿತ್ರರಂಗದಲ್ಲಿ ಒಳ್ಳೆಯರು, ಕೆಟ್ಟವರು ಇದ್ದಾರೆ. ಮಾದಕ ವಸ್ತುವಿನಿಂದ ಶಾಲ ಮಕ್ಕಳು ,ಕಾಲೇಜು ವಿದ್ಯಾರ್ಥಿ , ವಿದ್ಯಾರ್ಥಿನಿಯರು ವ್ಯಸನಿಗಳೂಗುತ್ತಿದ್ದಾರೆ. ಮೂರು ತಿಂಗಳಿಗೆ ಒಮ್ಮೆ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಬೇಕು. ಮಕ್ಕಳ ಚಲನವಲನದ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು. ಮಾದಕ ವ್ಯಸನಿಗಳು ಕಣ್ಣಿನ ಔಷಧಿ ಬಳಕೆ ಮಾಡುತ್ತಾರೆ ಕಣ್ಣಿನ ಔಷಧಿ ತೆಗೆದುಕೊಳ್ಳುವವರ ಬಗ್ಗೆ ನಿಗಾ ವಹಿಸಬೇಕು ಎಂದು ತಾರಾ ಅಭಿಪ್ರಾಯ ವ್ಯಕ್ತಪಡಿಸಿದರು.

Related posts