‘ಗ್ರಾಮ-1’ ಕೇಂದ್ರಕ್ಕೆ ಸಿಎಂ ಪ್ರಾಯೋಗಿಕ ಚಾಲನೆ

ಬೆಂಗಳೂರು: ದಾವಣಗೆರೆ ಜಿಲ್ಲೆಯ 100 ಗ್ರಾಮಗಳಲ್ಲಿ ‘ಗ್ರಾಮ-1’ ಕೇಂದ್ರವನ್ನು ಸಕಾಲ ಯೋಜನೆ ಅಡಿಯಲ್ಲಿ ಅನುಷ್ಠಾನ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಚಾಲನೆ ನೀಡಿದರು.

ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕರಾದ ಶ್ರೀ ಎಂ.ಪಿ.ರೇಣುಕಾಚಾರ್ಯ ಉಪಸ್ಥಿತಿಯಲ್ಲಿ ‘ಗ್ರಾಮ-1’ ಚಾಲನೆ ನೀಡಲಾಯಿತು.

ಮಾಯಕೂಂಡ ಶಾಸಕರಾದ ಪ್ರೊ. ಲಿಂಗಣ್ಣ , ಶಂಕರ್ ಗೌಡ ಪಾಟೀಲ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts