ಜಾತಿ ರಾಜಕಾರಣ ಮಾಡುವವರಿಗೆ ಉಪಚುನಾವಣೆ ಒಳ್ಳೆಯ ಪಾಠ; ಬಿ.ಸಿ.ಪಾಟೀಲ್

ಧಾರವಾಡ: ಬೆಂಗಳೂರಿನಲ್ಲಿ ಜಾತಿ ರಾಜಕಾರಣ ಮಾಡುವವರಿಗೆ ಈ ಉಪಚುನಾವಣೆ ದೊಡ್ಡ ಪಾಠ. ಪ್ರಜಾಪ್ರಭುತ್ವದಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ ಎಂಬುದಕ್ಕೆ ಶಿರಾ ಹಾಗೂ ಆರ್.ಆರ್.ನಗರ ಫಲಿತಾಂಶ ತಕ್ಕ ಉದಾಹರಣೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಯಡಿಯೂರಪ್ಪ ನೇತೃತ್ವದ ಸರ್ಕಾರದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳು ಈ ಉಪಚುನಾವಣೆಯಲ್ಲಿ ಗೆಲುವು ತಂದಿವೆ.ಮತದಾರ ಅಭಿವೃದ್ಧಿಯನ್ನು ಕೈ ಹಿಡಿಯುತ್ತಾನೆ ಎನ್ನುವುದಕ್ಕೆ ಈ ಫಲಿತಾಂಶ ಸಾಕ್ಷಿ ಎಂದರು.

Related posts