ಫೆಬ್ರವರಿ 1ರಂದು ಕೇಂದ್ರ ಬಜೆಟ್; ಎಲ್ಲರ ಚಿತ್ತ ಮೋದಿಯತ್ತ

ದೆಹಲಿ : ಕೊರೋನಾ ಆತಂಕದ ನಡುವೆಯೇ ಕೇಂದ್ರ ಸರ್ಕಾರ ಫೆಬ್ರವರಿ ಒಂದರಂದು ಬಜೆಟ್ ಮಂಡಿಸಲಿದೆ. ಈ ತಿಂಗಳ 29 ರಿಂದ ಫೆಬ್ರವರಿ 15 ರವರೆಗೆ ಸಂಸತ್ತು ಬಜೆಟ್ ಅಧಿವೇಶನದ ಮೊದಲ ಭಾಗವನ್ನು ನಡೆಸಲಾಗುವುದು ಎಂದು ಸಂಸದೀಯ ಮೂಲಗಳು ತಿಳಿಸಿವೆ. ಈ ಅಧಿವೇಶನದಲ್ಲಿ, ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ.

ಕಳೆದ ಮುಂಗಾರು ಅಧಿವೇಶನದಲ್ಲಿ ವಿವಾದಾತ್ಮಕ ಕೃಷಿ ಮಸೂದೆಗಳನ್ನು ಅಂಗೀಕರಿಸಲಾಗಿತ್ತು. ಆ ವೇಳೆ ಮಂತ್ರಿಗಳು ಸೇರಿದಂತೆ ಕೆಲವು ಸಂಸದರು ಕೋವಿಡ್ ಪಾಸಿಟಿವ್ ಆದ ಹಿನ್ನಲೆಯಲ್ಲಿ ಅಧಿವೇಶನವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದೀಗ ಈ ಬಜೆಟ್ ಅಧಿವೇಶನದಲ್ಲಿ ರೈತರ ಪ್ರತಿಭಟನೆ ಹಾಗೂ ಕೋರಿದ್ ಲಸಿಕೆ ಸಹಿತ ಹಲವು ವಿಚಾರಗಳನ್ನು ಮುಂದಿಟ್ಟು ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ.

Related posts