ಬೈಕ್ ಶೋರೂಮ್’ಗೆ ಬೆಂಕಿ; ವಾಹನಗಳು ಭಸ್ಮ

ತುಮಕೂರು: ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೆಮಿಕಲ್ ಸಂಗ್ರಹಣಾ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕ ಘಟನೆಯ ನಂತರ ತುಮಕೂರಿನಲ್ಲೂ ಅಂತಹುದೇ ಭೀಕರ ಅನಾಹುತ ನಡೆದಿದೆ.

ತುಮಕೂರಿನ ಬಿಹೆಚ್ ರಸ್ತೆಯಲ್ಲಿನ ಹೋಂಡಾ ಶೋರೂಮ್’ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಬೈಕ್’ಗಳು ಸುಟ್ಟು ಹೋಗಿವೆ.
ಮಾಹಿತಿ ಆಧರಿಸಿ ಸ್ಥಳಕ್ಕಾಕ್ಕೆ ಧಾವಿಸಿದ ಅಗ್ನಿಶಾಮಕ ದಶದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್’ನಿಂದ ಅಗ್ನಿ ಅವಘಢ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

Related posts