ನೆಚ್ಚಿನ ವ್ಯಕ್ತಿಯ ಹುಟ್ಟುಹಬ್ಬ ಪ್ರಯುಕ್ತ ಕೊರೋನಾ ರೋಗಿಗಳ ಸೇವೆ

ಉಡುಪಿ: ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಸಾಮಾಜಿಕ ಕಾರ್ಯಕರ್ತ, ಉದ್ಯಮಿಯ ಜನ್ಮ ದಿನವನ್ನು ಊರ ನಾಗರಿಕರು ಕೊರೋನಾ ವಾರಿಯರ್ಸ್’ಗಳ ಸೇವೆಯ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ನಾಡಿನ ವಿವಿಧ ಸಂಸ್ಥೆಗಳ ಉದ್ಯೋಗಿಗಳ ಹಸಿವು ನೀಗಿಸುವ ಶೆಫ್ ಟಾಕ್ ಕಂಪೆನಿಯ ಮಾಲೀಕ ಗೋವಿಂದ ಬಾಬು ಪೂಜಾರಿಯವರ ಹುಟ್ಟುಹಬ್ಬ ಶುಕ್ರವಾರ ನೆರವೇರಿತು. ಅವರು ಎಲ್ಲೆಲ್ಲಾ ನಾಡಿನ ಜನರ ಸೇವೆ ಮಾಡಿದ್ದಾರೋ, ಯಾರಿಗೆಲ್ಲಾ ನೆರವಾಗಿದ್ದಾರೋ ಅಲ್ಲೆಲ್ಲಾ ಈ ರೀತಿ ಅನನ್ಯ ಕಾರ್ಯಕ್ರಮ ನೆರವೇರಿತು.

ಬೆಂಗಳೂರಿನಲ್ಲಿ ಕೊರೋನಾ ವಾರಿಯರ್ಸ್’ಗಳಿಗೆ ಅಗತ್ಯ ವಸ್ತುಗಳ ಕಿಟ್ ನೀಡಿದ ಗೋವಿಂದ ಬಾಬು ಪೂಜಾರಿಯವರ ಆಪ್ತರು, ಅತ್ತ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸಂತ್ರಸ್ತರ ಸೇವೆಯಲ್ಲಿ ತೊಡಗಿದವರ ಪಾಲಿಗೆ ಆಶಾಕಿರಣವಾದರು.

ಕುಂದಾಪುರ ಸರಕಾರಿ ಕೋವಿಡ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲುಗಳನ್ನು ವಿತರಿಸಿದರು. ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ರೊಬರ್ಟ್ ರೆಬೆಲ್ಲೊ ಹಾಗೂ ಡಾ.ನಾಗೇಶ ಅವರಿಗೆ ಈ ಹಣ್ಣು ಹಂಪಲು ಹಸ್ತಅಂತರಿಸಿ ಅವರ ಮೂಲಕ ಎಲ್ಲಾ ರೋಗಿಗಳಿಗೆ ಹಾಗೂ ಆರೈಕೆ ನಿರತರಿಗೆ ಹಂಚಲಾಯಿತು.

ನಮ್ಮೂರಿನ ಕೊಡುಗೈದಾನಿಗಳಾದ ಗೋವಿಂದ ಬಾಬು ಪೂಜಾರಿ ಯವರ ಹುಟ್ಟುಹಬ್ಬದ ಪ್ರಯುಕ್ತ ಅವರ ಹಿತೈಷಿಗಳು ಹಾಗೂ ಅಭಿಮಾನಿಗಳು ಸೇರಿಕೊಂಡು ಈ ರೀತಿ ಸೇವೆ ಮಾಡುತ್ತಿರುವುದಾಗಿ ಗ್ರಾಮದ ಹಿರಿಯರು ಹೇಳಿದರು. ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಉದ್ಯಮಿ ಪ್ರಕಾಶ್ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ದೇವಾಡಿಗ, ರಾಜೇಶ್ ಖಂಬದಕೋಣೆ, ಸ್ಥಳೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷರು ಶೇಖರ್ ಪೂಜಾರಿ ಉಪ್ಪುಂದ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ.. ಕೊರೋನಾ ವಾರಿಯರ್ಸ್’ಗಳಿಗೆ ಗೌರವ.. ವಿಶಿಷ್ಟ ರೀತಿಯಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಹುಟ್ಟುಹಬ್ಬ

 

Related posts