ಪಂಚಾಯತ್ ಸಮರ; ಬಂಟ್ವಾಳ ಸುತ್ತಮುತ್ತ ಕೇಸರಿ ಸೈನ್ಯದ ಸವಾರಿ

ಮಂಗಳೂರು: ರಾಜಕೀಯ ಮೇಲಾಟದಲ್ಲಿ ಇಡೀ ರಾಜ್ಯದ ಗಮನಸೆಳೆದಿರುವ ಬಂಟ್ವಾಳ ಇದೀಗ ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲೂ ಕುತೂಹಲದ ಕ್ಷೇತ್ರವೆನಿಸಿದೆ.

ಗ್ರಾಮ ಪಂಚಾಯತ್ ಚುನಾವಣಾ ಘೋಷಣೆಯಾದಾಗಿನಿಂದ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.
ಕಳೆದ ಚುನಾವಣೆಗಳಂತೆಯೇ ಬಂಟ್ವಾಳ ತಾಲೂಕಿನಲ್ಲಿ ಬಿಜೆಪಿ ಬೆಂಬಲಿಗರ ಪರವಾಗಿ ಇಡೀ ಸಂಘ ಪರಿವಾರವೇ ನಿಂತಿದೆ. ಅದರಲ್ಲೂ ಬೆಳ್ಳೂರು ಸುತ್ತಮುತ್ತಲ ಗ್ರಾಮಗಳಲ್ಲಿ ಬಿಜೆಪಿ, ಹಾಗೂ ಸಂಘ ಪರಿವಾರದ ಕಾರ್ಯಕರ್ತರ ತಂಡ ಸಮರ ಸಜ್ಜಿನಲ್ಲಿ ಮತ ಬೇಟೆ ಕೈಗೊಂಡಿದೆ.

ಬಂಟ್ವಾಳ‌ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಭದ್ರ ಕೋಟೆ ತೆಂಕಬೆಳ್ಳೂರು ಗ್ರಾಮದಲ್ಲಿ ವಾರಾಂತ್ಯದ ರಾಜಾ ದಿನಗಳಂದು ಸಂಘದ ವಿವಿಧ ಕ್ಷೇತ್ರಗಳಾದ ವಿಶ್ವಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣಾ ವೇದಿಕೆಯಾ ಸುಮಾರು 50 ಕಾರ್ಯಕರ್ತರ ವಿವಿಧ ತಂಡಗಳು ಬಿಜೆಪಿ ಅಭ್ಯರ್ಥಿಗಳ‌ ಗೆಲುವಿಗಾಜಿ ಬಿರುಸಿನ ಪ್ರಚಾರ ಕೈಗೊಂಡಿತು.

Related posts