ಗುಲ್ಬರ್ಗಾ ವಿವಿಗೆ ಅಗಸರ ಸಾರಥ್ಯ?

ಬೆಂಗಳೂರು: ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಆಯ್ಕೆ ವಿಚಾರ ಶೈಕ್ಷಣಿಕ ಕ್ಷೇತ್ರದಲ್ಲಷ್ಟೇ ಅಲ್ಲ ರಾಜಕೀಯ ವಲಯದಲ್ಲೂ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ. ಈ ಪ್ರತಿಷ್ಠಿತ ಸ್ಥಾನಕ್ಕೆ ಶಿಕ್ಷಣ ತಜ್ಞರಾದ ಪೊ.ಮೈಲಾರಪ್ಪ ಹಾಗೂ ಪ್ರೊ.ದಯಾನಂದ ಅಗಸರ ಹೆಸರುಗಳು ಮುಂಚೂಣಿಯಲ್ಲಿದ್ದು ಈ ಪೈಕಿ ಅಗಸರ ಹೆಸರಿನತ್ತ ಕೇಸರಿ ದಿಗ್ಗಜರ ಒಲವು ವ್ಯಕ್ತವಾಗಿದೆ.

ಏನಿದು ಲೆಕ್ಕಾಚಾರ?

ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಗೋಮತಿ, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಹಾಗೂ ಪ್ರೊ.ದಯಾನಂದ್ ಅಗಸ್ ಹೆಸರನ್ನೊಳಗೊಂಡ ಪಟ್ಟಿಯನ್ನು ರಾಜ್ಯ ಸರ್ಕಾರ ರಾಜ್ಯಪಾಲರ ಅಂಕಿತಕ್ಜಾಗಿ ಕಳುಹಿಸಿಕೊಟ್ಟಿದೆ. ಆದರೆ ಈ ಪೈಕಿ ಕುಲಪತಿಯಾಗಿ ಯಾರು ಆಯ್ಕೆಯಾಗುವರೆಂಬುದೇ ಕುತೂಹಲ.

ವಿವಿ ಕುಲಪತಿ ಆಯ್ಕೆ ಸಂಬಂಧದ ಶೂಧನಾ ಸಮಿತಿಯು ಈ ಮೂವರ ಹೆಸರುಗಳನ್ನು ಶಿಫಾರಸು ಮಾಡಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಮೈಲಾರಪ್ಪ ಅವರ ಪರ ಬ್ಯಾಟಿಂಗ್ ಮಾಡುತ್ತಿದ್ದರು. ಅದರೆ ಆರೆಸ್ಸೆಸ್ ಹಿರಿಯ ನಾಯಕರು ದಯಾನಂದ್ ಅರಸ್ ಅವರಿಗೆ ಬೆಂಗಾವಲಾಗಿ ನಿಂತಿದ್ದಾರೆ. ಬಿಜೆಪಿ ವರಿಷ್ಠರು ಕೂಡಾ ದಯಾನಂದ್ ಬಗ್ಗೆ ಒಲವು ತೋರಿದ್ದಾರೆನ್ನಲಾಗಿದ್ದು ಅವರ ಹೆಸರನ್ನೇ ಅಂತಿಮಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸಿಎಂ ನಡೆಗೆ ಸಂಘ ಪರಿವಾರದ ವರಿಷ್ಠರ ಅಸಮಾಧಾನ

ಈ ನಡುವೆ, ಈ ಹಿಂದೆ ಹಲವಾರು ಬಾರಿ ವಿವಾದಗಳಲ್ಲಿ ಸಿಲುಕಿರುವ ಮೈಲಾರಪ್ಪ ಅವರನ್ನು ಗುಲ್ಬರ್ಗಾ ವಿವಿ ಕುಲಪತಿಯನ್ನಾಗಿ ನೇಮಕ ಮಾಡುವ ಸಿಎಂ ಪ್ರಯತ್ನಕ್ಕೆ ಸಂಘ ಪರಿವಾರದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಬೆಂಗಳೂರು ವಿವಿಯ ಈ ಹಿಂದಿನ ಬೆಳವಣಿಗೆ ಹಾಗೂ ವಿವಾದಗಳಲ್ಲಿ ಸಿಲುಕಿದ್ದ ಮೈಲಾರಪ್ಪ ವಿರುದ್ಧ ಎಬಿವಿಪಿ ಧ್ವನಿ ಎತ್ತುತ್ತಲೇ ಬಂದಿದೆ. ಹೀಗಿರುವಾಗ ಅಂತಹಾ ವ್ಯಕ್ತಿಯನ್ನು ಕುಲಪತಿಯಾಗಿ ನೇಮಕ ಮಾಡುವುದು ಸರಿಯಲ್ಲ ಎಂಬ ಅಸಮಾಧಾನದ ಧ್ವನಿ ಯಾದವ ಸ್ಮೃತಿಯಿಂದ ಪ್ರತಿಧ್ವನಿಸಿದರೆ, ಅಧಿಕಾರಕ್ಕಾಗಿ ಇತರ ಪಕ್ಷಗಳ ಮುಖಂಡರ ಜೊತೆ ಗಿರಕಿ ಹೊಡೆಯುತ್ತಿರುವವರಿಗೆ ಮಣೆ ಹಾಕುವ ಅಗತ್ಯವೇನಿದೆ ಎಂದು ಹಿರಿಯ ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

ಈ ವಿಚಾರ ರಾಜಭವನದ ಅಂಗಳ ತಲುಪಿದೆ ಎನ್ನಲಾಗುತ್ತಿದ್ದು, ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಅರಸ್ ನೇಮಕ ಬಹುತೇಕ ಸಾಧ್ಯವಿದೆ ಎಂದು ಹೇಳಲಾಗುತ್ತಿದೆ.

Related posts