‘ಪೇರಳೆ ಚಿಗುರು ತಂಬುಳಿ’; ಕಾಯಿಲೆಗಳಿಗೆ ತಡೆ

ವೃದ್ದಾಪ್ಯ ತಡೆಯುವ ಪ್ರಯತ್ನವೇ? ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೇ? ‘ಚಿಗುರೆಲೆ ತಂಬುಳಿ’ ಇದಕ್ಕೆ ಸೂಕ್ತ.. ಅದರಲ್ಲೂ ‘ಪೇರಳೆ ಚಿಗುರು ತಂಬುಳಿ’ ಎಲ್ಲಕ್ಕಿಂತ ಉತ್ತಮ.
ಇದನ್ನು ಮಾಡುವ ವಿಧಾನವೂ ಬಲು ಸುಲಭ..

ಬೇಕಾದ ಸಾಮಾಗ್ರಿ:

  • ತೆಂಗಿನತುರಿ 1 ಕಪ್
  • ಜೀರ 1 ಚಮಚ
  • ಕಾಯಿಮೆಣಸು 1
  • ಪೇರಳೆ ಚಿಗುರು 2 ಕಪ್
  • ಮಜ್ಜಿಗೆ ಅಥವಾ ಮೊಸರು 1 ಕಪ್
  • ಎಣ್ಣೆ 2 ಚಮಚ
  • ಬೆಳ್ಳುಳ್ಳಿ 4 ( ಬೇಕಾದಲ್ಲಿ)
  • ಕೆಂಪು ಮೆಣಸು 1
  • ಸಾಸಿವೆ 1 s
  • ಕರಿಬೇವು
  • ಉಪ್ಪು ರುಚಿಗೆ ತಕ್ಕಸ್ಟು

ಮಾಡುವ ವಿಧಾನ: 

  • ಮೊದಲಿಗೆ ಪೇರಳೆ ಚಿಗುರನ್ನು ಚೆನ್ನಾಗಿ ಶುಚಿ ಮಾಡಿ, ತೊಳೆದು, ಅದನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ, ತಣ್ಣಗಾಗಲು ಬಿಡಿ.
  • ಒಂದು ಮಿಕ್ಸಿ ಜಾರಿನಲ್ಲಿ ಕಾಯಿತುರಿ, ಜೀರಿಗೆ, ಕಾಯಿಮೆಣಸು, ಬೇಯಿಸಿದ ಪೇರಳೆ ಚಿಗುರು, ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಒಂದು ಪಾತ್ರೆಗೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಮಜ್ಜಿಗೆ ಅಥವ ಮೊಸರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.
  • ಒಂದು ಚಿಕ್ಕ ಬಾಣಲೆಯಲ್ಲಿ ಎಣ್ಣೆ, ಬೆಳ್ಳುಳ್ಳಿ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ತಂಬುಳಿಗೆ ಸೇರಿಸಿದರೆ ರುಚಿಯಾದ ಪೇರಳೆ ಚಿಗುರಿನ ತಂಬುಳಿ ಸಿದ್ಧವಾಗುತ್ತದೆ. ಇದನ್ನು ಹಾಗೆಯೇ ಕುಡಿಯಬಹುದು ಅಥವಾ ಊಟದ ಜೊತೆ ಸವಿಯಬಹುದು.

Related posts