ಮಂತ್ರಿ ಸ್ಥಾನ; ವಿಶ್ವನಾಥ್ ಕನಸಿಗೆ ತಣ್ಣೀರು, ಶಂಕರ್, ಎಂಟಿಬಿ ನಿರಾಳ

ಬೆಂಗಳೂರು: ಆಪರೇಷನ್ ಕಮಲಕ್ಕೆ ತುತ್ತಾಗಿದ್ದ ಮಾಜಿ ಸಚಿವ ಎಚ್.ವಿಶ್ವನಾಥ್ ಅವರು 2021ರವರೆಗೆ ಮಂತ್ರಿಯಾಗುವುದು ಅನುಮಾನ.
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಹಳ್ಳಿಹಕ್ಕಿ ಎಚ್.ವಿಶ್ವನಾಥ್ 2021ರವರೆಗೆ ಸಚಿವರಾಗಲು ಅನರ್ಹರು ಎಂದು ಹೈಕೋರ್ಟ್ ಹೇಳಿದೆ.

ಎಚ್ ವಿಶ್ವನಾಥ್, ಆರ್ ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನದ ಅವಕಾಶ ನೀಡದಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗಿಯ ಪೀಠ, ಹೆಚ್ ವಿಶ್ವನಾಥ್ ಅವರ ಅನರ್ಹತೆ ಮುಂದುವರಿದಿರುವುದರಿಂದ ಅವರು ಸಚಿವರಾಗಲು ಅನರ್ಹರಾಗಿದ್ದಾರೆ ಎಂದಿದೆ.

ವಿಶ್ವನಾಥ್ ಅವರು ವಿಧಾನಸಭಾ ಸದ್ಸ್ಯತ್ವದಿಂದ ಅನರ್ಹರಾಗಿದ್ದಾರೆ. ಅವರು ಒಂದು ವೇಳೆ ಮತ್ತೊಮ್ಮೆ ಚುನಾಯಿತರಾದರೆ ಮಾತ್ರ ಅನರ್ಹತೆಯ ಕಳಂಕದಿಂದ ದೂರವಾಗುತ್ತಾರೆ. ಆದರೆ ಇದೀಗ ಅವರು ವಿಧಾನ ಪರಿಷತ್’ಗೆ ನೇಮಕವಾಗಿದ್ದು ಚುನಾಯಿತ ಸದಸ್ಯರಲ್ಲ. ಹಾಗಾಗಿ ಅವರ ಅನರ್ಹತೆ ಮುಂದುವರಿದಿದೆ ಎಂಬುದು ಅರ್ಜಿದಾರರ ವಾದ. ಈ ವಾದವನ್ನು ಕೋರ್ಟ್ ಪುರಸ್ಕರಿಸಿದೆ.

ಆದರೆ ಮೇಲ್ಮನೆ ಸದಸ್ಯರಾಗಿ ಚುನಾಯಿತರಾಗಿರುವ ಆರ್. ಶಂಕರ್, ಎಂ.ಟಿ.ಬಿ.ನಾಗರಾಜ್ ಸಚಿವರಾಗಲು ಅಡ್ಡಿಯಿಲ್ಲ ಎಂದು ಕೋರ್ಟ್ ಹೇಳಿದ್ದು ಈ ಇಬ್ಬರು ನಾಯಕರು ನಿರಾಳರಾಗಿದ್ದಾರೆ.

Related posts