ಜೆಡಿಎಸ್’ಗೆ ಹೊಸ ಕೋರ್ ಕಮಿಟಿ; ಪಕ್ಷ ಬಲಪಡಿಸಲು ಹೆಚ್ಡಿಕೆ ತಂತ್ರ

ಬೆಂಗಳೂರು: ಪಂಚಾಯತ್ ಚುನಾವಣೆಯ ಬೆನ್ನಲೇ ರಾಜ್ಯದಲ್ಲಿ ಜೆಡಿಎಸ್ ಇದೀಗ ಪಕ್ಷ ಸಂಘಟನೆಗೆ ಸಿದ್ಧವಾಗಿದೆ. ಪಕ್ಷದ ಕೋರ್ ಕಮಿಟಿಯನ್ನು ಹೊಸದಾಗಿ ರಚಿಸಲು ಮುಂದಾಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ, ಅದ್ಕಕಾಗಿ ಈ ತಿಂಗಳ 18ರಂದು ಪಕ್ಷದ ಪ್ರಮುಖರ ಸಭೆಯನ್ನು ಕರೆದಿದ್ದಾರೆ.

ಹೊಸ ಕೋರ್ ಕಮಿಟಿಯನ್ನು ಅಸ್ತಿತ್ವಕ್ಕೆ ತರಲಾಗುವುದು, ನಂತರ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಗುವುದು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Related posts