ಬಿಜೆಪಿ-ಜೆಡಿಎಸ್ ವಿಲೀನ ಚಿಂತನೆ ವಿಚಾರ; ಅತೃಪ್ತ ನಾಯಕರ ಬಗ್ಗೆ ಹೆಚ್ಡಿಕೆ ಗರಂ

ಬೆಂಗಳೂರು: ಬಿಜೆಪಿ-ಜೆಡಿಎಸ್ ವಿಲೀನ ಚಿಂತನೆ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಜೆಡಿಎಸ್’ನ ಅನೇಕರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡಿದ್ದಾರೆ. ಇನ್ನೂ ಕೆಲವರು ಬಹಿರಂಗವಾಗಿಯೇ ಸಿಟ್ಟು ಹೊರಹಾಕಿದ್ದಾರೆ.

ನಾಯಕರ ಈ ಹೇಳಿಕೆಯಿಂದ ಸಿಡಿಮಿಡಿಗೊಂಡಿರುವ ಕುಮಾರಸ್ವಾಮಿ, ಸ್ಪಷ್ಟ ಸಂದೇಶವೊಂದನ್ನು ರವಾನಿಸಿದ್ದಾರೆ. ಪಕ್ಷದ ನಿರ್ಧಾರ ಮತ್ತು ಪಕ್ಷದ ಸಿದ್ಧಾಂತಗಳಿಂದ ಅಸಂತುಷ್ಟವಾಗಿರುವ ನಾಯಕರು ಜೆಡಿಎಸ್’ನಿಂದ ಹೊರ ಹೋಗಬಹುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಹೆಚ್ ಕೆ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಿಂದ ಪ್ರತಿಕ್ರಿಯಿಸಿರುವ ಅವರು, ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಪಕ್ಷದ ಮುಖಂಡರ ಬಗ್ಗೆ ಮಾತನಾಡುತ್ತಿರುವವರು ಪಕ್ಷ ತ್ಯಜಿಸಲು ಸ್ವತಂತ್ರರು ಎಂದು ಹೇಳಿದ್ದಾರೆ. ಅಸಮಾಧಾನವಿದ್ದರೆ ತಾವೇ ನಿರ್ಗಮಿಸಬಹುದು. ಇಲ್ಲವಾದರೆ ಪಕ್ಷವೇ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಜೆಡಿಎಸ್ ಬೇರೆ ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ ಹೆಚ್ಡಿಕೆ, ಪಕ್ಷವನ್ನು ಬಲಪಡಿಸಲು ನಾಯಕರು ಜನವರಿ 15 ರ ನಂತರ ರಾಜ್ಯ ಪ್ರವಾಸವನ್ನು ಪ್ರಾರಂಭಿಸುತ್ತಾರೆ ಎಂದರು.

Related posts