ಮಂಗಳೂರಿನಲ್ಲಿ ಕಾಶೀಮಠಾಧೀಶರ ಚಾತುರ್ಮಾಸ್ಯ ವ್ರತ ಆರಂಭ

ಮಂಗಳೂರು: ಗೌಡ ಸಾರಸ್ವತ ಸಮಾಜದ ಕಾಶೀಮಠಾಧೀಶ ಸಂಯಮೀಂದ್ರ ತೀರ್ಥರ ಚಾತುರ್ಮಾಸ್ಯ ವ್ರತ ಮಂಗಳೂರಿನ ಕೊಂಚಾಡಿ ಕ್ಷೇತ್ರದ  ಶ್ರೀ ಕಾಶೀ ಶಾಖಾಮಠದಲ್ಲಿ ಆರಂಭವಾಗಿದೆ. ಶುಕ್ರವಾರ ಮೃತಿಕಾ ಪೂಜನೆಯೊಂದಿಗೆ ಕೈಂಕರ್ಯವನ್ನು ಆರಂಭಿಸಲಾಯಿತು.

ಪ್ರಾತಃ ಕಾಲ ಶ್ರೀ ಸಂಸ್ಥಾನದ ಶ್ರೀ ದೇವತೆಗಳಿಗೆ ಪಂಚಾಮೃತ, ಗಂಗಾಭಿಷೇಕ , ಲಘು ವಿಷ್ಣು ಅಭಿಷೇಕ , ಶತಕಲಶಾಭಿಷೇಕ, ಪವಮಾನ ಅಭಿಷೇಕಗಳನ್ನು ಶ್ರೀಗಳು ನೆರವೇರಿಸಿದರು. ಇದೇ ಸಂದರ್ಭದಲ್ಲಿ ತಪ್ತ ಮುದ್ರಾಧಾರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆ ಅನಿವಾರ್ಯವಾದ್ದುದರಿಂದ ಸಮಾಜ ಭಾಂದವರಿಗೆ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ಇರಲಿಲ್ಲ.

ಈ ನಡುವೆ ಸಂಸ್ಥಾನದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ ಸಂದರ್ಭದಲ್ಲಿ ಸೇವೆ ಸಲ್ಲಿಸಲು ಭಕ್ತರಿಗೆ ಅವಕಾಶವಿದೆ. ಆಸಕ್ತ ಭಕ್ತರು ದೂರವಾಣಿ ಸಂಖ್ಯೆಗಳಿಗೆ 9449362909, 9448845909 ಸಂಪರ್ಕಿಸ ಬಹುದೆಂದು ಮಠದ ಪ್ರಮುಖರು ತಿಳಿಸಿದ್ದಾರೆ.

ಚಿತ್ರ : ಮಂಜು ನೀರೇಶ್ವಾಲ್ಯ

ಜೂನ್  30 ರಿಂದಲೇ ಉತ್ಸವದ ಸಂಭ್ರಮ

ಚಾತುರ್ಮಾಸ್ಯ ವೃತದ ಪ್ರಯುಕ್ತ ಸಂಯಮೀಂದ್ರ ತೀರ್ಥರು ಜೂನ್  30ರಂದು ಕೊಂಚಾಡಿ ಶಾಖಾಮಠ ತಲಪಿದ್ದರು. ಆ ಸಂದರ್ಭದಲ್ಲಿ ಶಾಖಾಮಠದ ವ್ಯವಸ್ಥಾಪಕ ಸಮಿತಿ, ವೈದಿಕರಿಂದ ಪೂರ್ಣ ಕುಂಭ ಸ್ವಾಗತ ನೀಡಲಾಗಿತ್ತು. ಸೆಪ್ಟಂಬರ್ 2 ರಂದು ಮೃತಿಕಾ ವಿಸರ್ಜನೆ, ಸೀಮೋಲ್ಲಂಘನೆ ಮೂಲಕ ಕಾಶೀಮಠಾಧೀಶರ ಚಾತುರ್ಮಾಸ ಕೊನೆಗೊಳ್ಲಲಿದೆ. ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ,  ಪಾರಾಯಣಗಳು ನಡೆಯಲಿವೆ. ಅತೀ ಸರಳ ರೀತಿಯಲ್ಲಿ ಈ ಬಾರಿ ಚಾತುರ್ಮಾಸದ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಠದ ಪ್ರಮುಖರು ತಿಳಿಸಿದ್ದಾರೆ.

ಜುಲೈ  25ರಂದು ನಾಗಪಂಚಮಿ, ಮಾಧವೇಂದ್ರ ಸ್ವಾಮಿ ಪುಣ್ಯತಿಥಿ, ಆಗಸ್ಟ್ ೮ರಂದು ಖುಗೋಪಕರ್ಮ,ಆಗಸ್ಟ್ ೧೧ ರಂದು ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಚಾತುರ್ಮಾಸ ಸಮಿತಿ, ಕಾಶಿಮಠದ ಶಾಖಾಮಠದಲ್ಲಿ ಆಯೋಜಿಸಿದೆ. ಆಗಸ್ಟ್ 22-26ರ ವರೆಗೆ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು, ಸೆಪ್ಟಂಬರ್ 1ರಂದು ಅನಂತ ಚತುರ್ದಶಿ ವ್ರತಾಚಾರಣೆ ನಡೆಯಲಿದೆ. ಸೆಪ್ಟಂಬರ್ 18 ರಿಂದ ಅಧಿಕಮಾಸ ಪ್ರಾರಂಭ , ಅಕ್ಟೋಬರ್ 17 ರಿಂದ ನವರಾತ್ರಿ ಆಚರಣೆ ಪ್ರಾರಂಭವಾಗಲಿದ್ದು ಅಕ್ಟೋಬರ್ 28 ರ ವರೆಗೆ ವಿವಿಧ ವಾಹನ ಪೂಜಾ ಸೇವೆಗಳು ನೆರವೇರಲಿದೆ.

ಇದನ್ನೂ ಓದಿ.. ಮಂಗಳೂರಿಗೆ ಕಾಶೀ ಮಠಾಧೀಶರ ಆಗಮನ; ಭವ್ಯ ಸ್ವಾಗತ 

 

Related posts