ಸಮಸ್ತ ಕೇರಳ ಜಂಇ ಯ್ಯತುಲ್ ಉಲಮಾ ಕಾಸರಗೋಡು ಜಿಲ್ಲಾ ಸಮಸ್ತ ನಿಯೋಗ ದಾರುನ್ನೂರಿಗೆ ಭೇಟಿ

ಮಂಗಳೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾಸರಗೋಡು ಜಿಲ್ಲಾ ಸಮಿತಿಯು ಸಿ. ಎಂ ಅಬ್ದುಲ್ಲಾ ಮುಸ್ಲಿಯಾರರ ಸ್ಮರಣಾರ್ಥವಾಗಿ ಕಾಸರಗೋಡು ಜಿಲ್ಲಾ ಸಮಸ್ತಾಲಯದ ಕಟ್ಟಡವನ್ನು ನಿರ್ಮಿಸಿ ಕೊಡುವಂತೆ ಶಹೀದ್ ಸಿ.ಎಂ ಅಬ್ದುಲ್ಲಾ ಮುಸ್ಲಿಯಾರ್ ಫೌಂಡೇಶನ್ ಸಮಿತಿಯನ್ನು ಕೋರಿದೆ.

ಈ ಕಾರ್ಯ ನಿಮಿತ್ತ ಸಮಸ್ತ ಕೇರಳ ಮುಶಾವರ ಸದಸ್ಯರು ಶನಿವಾರ ಕಾಸರಗೋಡು ಜಿಲ್ಲಾ ಜಮೀಯ್ಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಹಾಗೂ ಪಳ್ಳಿಕೆರೆ- ನಿಲೇಶ್ವರ ಖಾಝಿಯವರಾದ ಇ ಕೆ ಮುಹಮ್ಮದ್ ಮುಸ್ಲಿಯಾರ್ ರವರು ಅಪೇಕ್ಷೆ ಪತ್ರವನ್ನು ದಾರುನ್ನೂರ್ ವಿದ್ಯಾ ಸಂಸ್ಥೆಗೆ ಆಗಮಿಸಿ ಸಂಸ್ಥೆಯ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಸಮಸ್ತ ಕೇರಳ ಜಮೀಯ್ಯತ್ತುಲ್ ಉಲಮಾದ ವರ್ಕಿಂಗ್ ಕಾರ್ಯದರ್ಶಿ ಚೆಂಗಳ ಅಬ್ದುಲ್ಲಾ ಫೈಝಿ, ಕಾಸರಗೋಡು ಜಿಲ್ಲಾ ಮುಶಾವರ ಸದಸ್ಯರಾದ ಅಬ್ಬಾಸ್ ಫೈಝಿ ಪುತ್ತಿಗೆ, ದಾರುನ್ನೂರ್ ಎಜುಕೇಶನ್ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ, ಕೋಶಾಧಿಕಾರಿಯಾದ ಮೊಹಮ್ಮದ್ ಹನೀಫ್ ಹಾಜಿ ಜೊತೆ ಕಾರ್ಯದರ್ಶಿ ಸಮದ್ ಹಾಜಿ, ಸದಸ್ಯರಾದ ಇಂಜಿನಿಯರ್ ಮುಹಮ್ಮದ್ ಇಕ್ಬಾಲ್, ಪ್ರಾಂಶುಪಾಲರಾದ ಅಮೀನ್ ಹುದವಿ, ಮುಖ್ಯ ಶಿಕ್ಷಕರಾದ ಹುಸೈನ್ ರಹ್ಮಾನಿ, ಉಪಪ್ರಾಂಶುಪಾಲರಾದ ತ್ವಾಹ ಹುದವಿ, ಮೆನೇಜರ್ ಅಬ್ದುಲ್ ಹಕೀಮ್ ಮೊದಲಾದವರು ಉಪಸ್ಥಿತರಿದ್ದರು.

Related posts