ಕೊಂಚಾಡಿ ಕಾಶೀ ಮಠದಲ್ಲಿ 9 ದಿನಗಳ ಮಹಾ ವೈಭವ

ಮಂಗಳೂರು : ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ಲೋಕ ಕಲ್ಯಾಣಾರ್ಥ ವಿವಿಧ ಕಿಂಕರ್ಯಗಳು ಆರಂಭವಾಗಿವೆ. ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶಾರ್ವರಿ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ಪ್ರಾರಂಭಗೊಂಡಿದ್ದು ಈ ಸಂದರ್ಭದಲ್ಲಿ ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಪಾರಾಯಣಗಳು ಆಯೋಜಿತವಾಗಿವೆ.

ಈ ಪುಣ್ಯಪ್ರದ ಶ್ರಾವಣ ಮಾಸದ ಪ್ರಾರಂಭದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ದೇವರ ಲೀಲೆ – ವೈಭವ , ದೇವರ ಚರಿತ್ರೆ ” ಶ್ರೀ ರಾಮಾಯಣ ಪಾರಾಯಣ ಹಾಗೂ ಪ್ರವಚನ 9 ದಿನಗಳ ಕಾಲ ಜರುಗಲಿರುವುದು.

ಆಗಸ್ಟ್ 4ರಂದು ಖುಗೋಪಾಕರ್ಮ, ಆಗಸ್ಟ್ 11ರಂದು ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಇದಲ್ಲದೇ ಆಗಸ್ಟ್ 22-26ರ ವರೆಗೆ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು, ಸೆಪ್ಟಂಬರ್ 1ರಂದು ಅನಂತ ಚತುರ್ದಶಿ ವ್ರತಾಚಾರಣೆ ನಡೆಯಲಿದೆ.

ಇದನ್ನೂ ಓದಿ. ಮಂಗಳೂರಿನಲ್ಲಿ ಕಾಶೀಮಠಾಧೀಶರ ಚಾತುರ್ಮಾಸ್ಯ ವ್ರತ

ಸೆಪ್ಟಂಬರ್ 14 ರಿಂದ ಅಧಿಕಮಾಸ ಪ್ರಾರಂಭ , ಅಕ್ಟೋಬರ್ 17 ರಿಂದ ನವರಾತ್ರಿ ಆಚರಣೆ ಪ್ರಾರಂಭವಾಗಲಿದ್ದು ಅಕ್ಟೋಬರ್ 28 ರ ವರೆಗೆ ವಿವಿಧ ವಾಹನ ಪೂಜಾ ಸೇವೆಗಳು ನಡೆಯಲಿದೆ. ಈ ಬಾರಿ ಕೊರೊನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಭಕ್ತಾದಿಗಳಿಗೆ ಶ್ರೀ ಕ್ಷೇತ್ರಕ್ಕೆ ಭೇಟಿಯನ್ನು ನಿರ್ಭಂದಿಸಲಾಗಿದೆ.

ಇದನ್ನೂ ಓದಿ.. ಮಂಗಳೂರಿಗೆ ಕಾಶೀ ಮಠಾಧೀಶರ ಆಗಮನ; ಭವ್ಯ ಸ್ವಾಗತ 

 

Related posts