ಕೆಎಸ್ಸಾರ್ಟಿಸಿ ಅವಾಂತರ; ರಸ್ತೆಯಲ್ಲೇ ಪಾಠ ಹೇಳಿ ಚಾಲಕರ ಚಳಿ ಬಿಡಿಸಿದ ಶಿಕ್ಷಣ ಸಚಿವ

ತುಮಕೂರು: ಸಾರಿಗೆ ಬಸ್’ಗಳ ಅವಾಂತರಕ್ಕೆ ಬ್ರೇಕ್ ಬೀಳುತ್ತಿಲ್ಲ. ಸರ್ಕಾರಿ ಅಧೀನದ ಸಂಸ್ಥೆ ಎಂಬ ಮನಸ್ಥಿತಿಯಲ್ಲಿ ಕೆಲ ಸಿಬ್ಬಂದಿ ತಮ್ಮ ಸೇವೆಯ ಮಹತ್ವವನ್ನೇ ಮರೆತು ತಮಗೆ ಬೇಕಾದಂತೆ ವರ್ತಿಸುವ ಆರೋಪಗಳು ಕೇಳಿರುತ್ತಿವೆ.

ಇಂತಹಾ ಘಟನೆಯನ್ನು ಕಣ್ಣಾರೆ ಕಂಡ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರು ಕೆಎಸ್ಸಾರ್ಟಿಸಿ ಬಸ್ ಚಾಲಕನ ಚಳಿ ಬಿಡಿಸಿದ ಪ್ರಸಂಗ ಕಲ್ಪತರು ನಾಡು ತುಮಕೂರು ಬಳಿ ನಡೆದಿದೆ.

 

ಶಾಲಾ ವಿದ್ಯಾರ್ಥಿಗಳು ಬಸ್ ನಿಲ್ಲಿಸಲೆಂದು ಕೋರಿದಾಗ ಕೆಎಸ್ಸಾರ್ಟಿಸಿ ಚಾಲಕರ ಬಸ್ ನಿಲ್ಲಿಸುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬೆಂಗಳೂರಿನಿಂದ ಮಧುಗಿರಿ ಕಡೆ ತೆರಳುತ್ತಿದ್ದ ಶಿಕ್ಷಣ ಸಚಿವರು ಶಾಲಾ ಮಕ್ಕಳ ಪರಿಸ್ಥಿತಿಯನ್ನು ಕಣ್ಣಾರೆ ಕಂಡರು. ಸಾರಿಗೆ ಬಸ್ ಚಾಲಕರ ವರ್ತನೆ ಬಗ್ಗೆ ಸಿಡಿಮಿಡಿಗೊಂಡ ಸಚಿವರು, ಬಸ್ ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಈ ರೀತಿಯ ವರ್ತನೆ ಪುನರಾವರ್ತನೆಯಾಗಬಾರದು ಎಂದು ಎಚ್ಚರಿಕೆ ನೀಡಿದ ಸಚಿವರು, ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಅಗತ್ಯ ಕ್ರಮವಹಿಸಬೇಕೆಂದು ಸೂಚಿಸಿದರು.

Related posts