ಲಡಾಖ್ ಸಂಘರ್ಷ; ಒಂದು ಹೆಜ್ಜೆ ಹಿಂದಿಟ್ಟ ಚೀನಾ ಸೇನೆ

ದೆಹಲಿ: ಅಚ್ಚರಿಯ ಬೆಳವಣಿಗೆಯಲ್ಲಿ ಲಡಾಖ್ ಗಡಿಭಾಗದ ಗಲ್ವಾನ್ ಕಣಿವೆ ಪ್ರದೇಶದಿಂದ ಚೀನಾ ಸೇನೆ ಒಂದು ಹೆಜ್ಜೆ ಹಿಂದಿತ್ತಿದೆ.

ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಭಾರತ-ಚೀನಾ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
20ಕ್ಕೂ ಹೆಚ್ಚು ಯೋಧರ ಸಾವಿನ ನಂತರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಗಡಿ ಭಾಗದಲ್ಲಿ ಸೇನೆಯನ್ನು ಬಲಗೊಳಿಸಿದೆ. ಜೊತೆಗೆ ಜಾಗತಿಕ ಸಮುದಾಯವೂ ಭಾರತದ ಪಾಲಿಗೆ ಸಹಾನುಭೂತಿ ವ್ಯಕ್ತಪಡಿಸಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೇ ಮೊದಲ ಬಾರಿಗೆ ಚೀನಾ ಸೇನೆ ವಿವಾದಿತ ಸ್ಥಳದಿಂದ ಕಾಲ್ಕಿತ್ತಿದೆ. ಗಲ್ವಾನ್ ಕಣಿವೆಯಲ್ಲಿ ಮೊಕ್ಕಾಂ ಹೂಡಿದ್ದ ಚೀನಾ ಸೇನೆ ಇದೀಗ ವಿವಾದಿತ ಪ್ರದೇಶದಿಂದ ಸುಮಾರು 1 ರಿಂದ 2 ಕಿ.ಮೀ ನಷ್ಚು ಹಿಂದಕ್ಕೆ ಹೋಗಿದೆ ಎಂದು ಮೂಲಗಳು ಹೇಳಿವೆ.

Related posts