ಬಿಟಿ ಸಿಟಿಗೆ ಖ್ಯಾತಿಯ ಗರಿ; ‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ಗೆ ಮುನ್ನುಡಿ

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದಾಗಿ ಇಡೀ ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಇದೀಗ ಬಯೊ ಟಡಕ್ನಾಲಜಿ ವಿಚಾರದಲ್ಲೂ ಜಗತ್ತಿನ ಗಮನ ಕೇಂದ್ರೀಕರಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಕುತೂಹಲದ ಕೇಂದ್ರಬಿಂದುವಾಯಿತು.

ಸುಮಾರು ಎರಡು ದಶಕಗಳ ಕನಸಾಗಿದ್ದ ’ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಡಿಗಲ್ಲು ಹಾಕಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಈ ಮಹತ್ವಾಕಾಂಕ್ಷೆಯ ಪಾರ್ಕ್‌ಗೆ ಶಿಲಾನ್ಯಾಸ ನೆರವೇರಿಸಿದರು.

ಎಲೆಕ್ಟ್ರಾನಿಕ್ ಸಿಟಿ ಬಳಿ ಸುಮಾರು 5,000 ಕೋಟಿ ರೂಪಾಯಿ ಹೂಡಿಕೆಯಲ್ಲಿ ತಲೆ ಎತ್ತಲಿರುವ ಈ ‘ಲೈಫ್ ಸೈನ್ಸೆಸ್ ಪಾರ್ಕ್’ನಿಂದ ಬೆಂಗಳೂರು ಬಿಟಿ ರಾಜಧಾನಿ ಎಂಬ ಹಿರಿಮೆಯನ್ನು ಉಳಿಸಿಕೊಳ್ಳಲಿದೆ.

Related posts