ಮೇ 17ರವರೆಗೂ ಲಾಕ್’ಡೌನ್; ಆದರೆ ಕೆಲವೆಡೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ

ಲಾಕ್’ಡೌನ್ ವಿಸ್ತರಣೆಯಾಗಿದೆ.. ಸಾರಿಗೆ ಸಂಚಾರ, ಸಭೆ ಸಮಾರಂಭಗಳು ಬಂದ್.. ಆದರೆ ಕೆಲವು ವಿಚಾರಗಳಿಗೆ ನಿಯಮ ಸಡಿಲಿಕೆ ಮಾಡಲಾಗಿದೆ. ಕೆಲವೆಡೆ ಮದ್ಯ ಸಿಗಲಿದೆ..

ದೆಹಲಿ: ಜಗತ್ತಿನಾದ್ಯಂತ ಕೊರೋನಾ ತಾಂಡವವಾಡುತ್ತಿದ್ದು ಭಾರತದಲ್ಲೂ ತನ್ನ ಪ್ರಾಬಲ್ಯ ಮೆರೆಯುತ್ತಿದೆ. ಈ ವರೆಗೂ ಎರಡು ಅವಧಿಯ ಲಾಕ್’ಡೌನ್ ಪರಿಸ್ಥಿತಿಯಲ್ಲೂ ಮಾರಕ ವೈರಾಣು ಸೋಂಕು ನಿಯಂತ್ರಣ ಸಾಧ್ಯವಾಗಿಲ್ಲ. ಹಾಗಾಗಿ ಇದೀಗ ಮೂರನೇ ಅವಧಿಗೆ ಲಾಕ್’ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಒಲ್ಲದ ಮನಸಿನಲ್ಲೇ ಪ್ರಧಾನಿ ಮೋದಿಯವರು ಈ ವಿಸ್ತರಣೆ ಮಾಡಿದ್ದು,  ಮೂರನೇ ಅವಧಿಯ ಲಾಕ್’ಡೌನ್ ಮೇ 17ರವರೆಗೂ ಜಾರಿಯಲ್ಲಿರಲಿದೆ.

ಕೊರೋನಾ ಸೋಂಕು ನಿಯಂತ್ರಿಸುವ ಸಂಬಂಧ ಕಳೆರಡೂ ತಿಂಗಳ ಕಾಲ ಪರದಾಡುತ್ತಿರುವ ಭಾರತದ ಜನ ಇನ್ನೂ ಎರಡು ವಾರಗಳ ಕಾಲ ಗೃಹ ಬಂಧನ ಅನುಭವಿಸಲೇಬೇಕಿದೆ.

  • ವಿಮಾನ, ರೈಲು, ಮೆಟ್ರೋ, ಅಂತಾರಾಜ್ಯ ಸಾರಿಗೆ ವ್ಯವಸ್ಥೆ ಇರುವುದಿಲ್ಲ.
  • ಶಾಲೆ ಕಾಲೇಜು, ಸಿನಿಮಾ ಹಾಲ್, ಮಾಲ್ ಬಂದ್
  • ಹೊಟೆಲ್, ರೆಸ್ಟೋರೆಂಟ್, ಕ್ಷೌರದಂಗಡಿ, ಸ್ಪಾ, ಸಲೂನ್ ​ಬಂದ್
  • ಪೂಜಾ- ಪ್ರಾರ್ಥನಾ ಮಂದಿರಗಳಿಗೂ ಅವಕಾಶ ಇಲ್ಲ
  • ಸಭೆ-ಸಮಾರಂಭ-ಉತ್ಸವಗಳೂ ನಿಷಿದ್ಧ.
  • ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಅನಗತ್ಯ ಜನಸಂಚಾರಕ್ಕೆ ನಿರ್ಬಂಧ.
  • 65 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಿಂದ ಹೊರಹೋಗುವಂತಿಲ್ಲ.

ಈ ನಡುವೆ ಕೋವಿಡ್ -19 ಸೋಂಕು ತಡೆ ಸಂಬಂಧ ಸೋಂಕು ಪ್ರಕರಣಗಳಿಗೆ ಅನುಗುಣವಾಗಿ ಝೋನ್’ಗಳನ್ನಾಗಿ ವಿಂಗಡಿಸಲಾಗಿದೆ. ಮೂರು ಝೋನ್’ಗಳನ್ನೂ ಪಟ್ಟಿ ಮಾಡಿರುವ ಕೇಂದ್ರ ಗೃಹ ಸಚಿವಾಲಯ, ಅತೀ ಹೆಚ್ಚು ಪ್ರಕರಣಗಳಿರುವ ಜಿಲ್ಲೆಗಳನ್ನು ರೆಡ್ ಝೋನ್ ಎಂದು ಗುರುತಿಸಿ ಅಲ್ಲಿ ಲಾಕ್’ಡೌನ್ ನಿಯಮಗಳನ್ನು ಬಿಗಿಗೊಳಿಸಿದೆ. ಆರೆಂಜ್ ಮತ್ತು ಗ್ರೀನ್ ಜೋನ್ ಗಳಲ್ಲಿ ಲಾಕ್’ಡೌನ್ ನಿಯಮ ಸಡಿಲಿಸಲಾಗಿದೆ.

ಇದನ್ನೂ ಓದಿ.. ಕೊರೋನಾ ಸಂಕಷ್ಟಕ್ಕೆ ಸಿದ್ದು ಶಿಷ್ಯರಂಥವರೇ ಕಾರಣ; ಕೈ ನಾಯಕರ ವಿರುದ್ಧ ಸಚಿವ ರವಿ ವಾಕ್ಪ್ರಹಾರ 

ದೇಶಾದ್ಯಂತ 733 ಜಿಲ್ಲೆಗಳನ್ನ ಈ 3 ಪಟ್ಟಿಗೆ ವಿಭಜಿಸಲಾಗಿದೆ. ಕರ್ನಾಟಕ ಸರ್ಕಾರ ಕೂಡಾ ತನ್ನದೇ ರೀತಿಯಲ್ಲಿ ಝೋನ್ ರಚನೆ ಮಾಡಿದ್ದು, 15 ಜಿಲ್ಲೆಗಳನ್ನು ಕೆಂಪು ಪಟ್ಟಿಯಲ್ಲಿ ಸೇರಿಸಿದೆ.

ರಾಜ್ಯದಲ್ಲಿನ ರೆಡ್ ಝೋನ್ ಜಿಲ್ಲೆಗಳು:

  1. ಬೆಂಗಳೂರು ನಗರ,
  2. ಮೈಸೂರು,
  3. ಬೆಳಗಾವಿ,
  4. ಕಲ್ಬುರ್ಗಿ,
  5. ವಿಜಯಪುರ,
  6. ಬಾಗಲಕೋಟೆ,
  7. ಮಂಡ್ಯ,
  8. ಬೀದರ್,
  9. ದಕ್ಷಿಣ ಕನ್ನಡ,
  10. ಬಳ್ಳಾರಿ,
  11. ಚಿಕ್ಕಬಳ್ಳಾಪುರ,
  12. ಧಾರವಾಡ,
  13. ಗದಗ,
  14. ತುಮಕೂರು,
  15. ದಾವಣಗೆರೆ 

ಮದ್ಯದಂಗಡಿಗೆ ಅವಕಾಶ

ಕೆಲವೆಡೆ ಮದ್ಯದಂಗಡಿಗಳನ್ನು ತೆರೆಯಬಹುದಾಗಿದೆ. ಆದರೆ, ಮದ್ಯದಂಗಡಿಗಳಲ್ಲಿ ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಏಕಕಾಲದಲ್ಲಿ ಐದು ಜನರಿಗಿಂತ ಹೆಚ್ಚಿಗೆ ಜನರು ಸೇರಬಾರದು ಎಂಬ ನಿಯಮ ವಿಧಿಸಲಾಗಿದೆ. ಹಾಗೆಯೇ, ಪಾನ್​ ಶಾಪ್​ ತೆರೆಯುವುದಕ್ಕೂ ಅನುಮತಿ ನೀಡಲಾಗಿದೆ.

ಇದನ್ನೂ ಓದಿ.. ಸಾಮಾಜಿಕ ಜಾಲತಾಣಗಳಲ್ಲಿ ಜನಾರ್ಧನ ಪೂಜಾರಿ ಬಗ್ಗೆ.. ಏನಿದು ಗೊತ್ತಾ?

 

Related posts