ಲಾಕ್’ಡೌನ್; ಈ ಬಾರಿ ಹಿಂದಿಗಿಂತಲೂ ಕಠಿಣ ನಿಯಮ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮಂಗಳವಾರ ರಾತ್ರಿಯಿಂದಲೇ ಲಾಕ್’ಡೌನ್ ಜಾರಿಯಾಗಲಿದ್ದು ಸರ್ಕಾರವಷ್ಟೇ ಅಲ್ಲ ಜನರೂ ಸಿದ್ದರಾಗಿದ್ದಾರೆ.

ಮಂಗಳವಾರ ರಾತ್ರಿಯಿಂದ ಮುಂದಿನ 1 ವಾರಗಳ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್’ಡೌನ್ ಜಾರಿಗೊಳಿಸುತ್ತಿದೆ.

ಕಳೆದ ಮಾರ್ಚ್ ತಿಂಗಳಲ್ಲೂ ರಾಜ್ಯಅದ್ಯಂತ ಲಾಕ್’ಡೌನ್ ಜಾರಿಯಾಗಿತ್ತಾದರೂ ಈ ಬಾರಿ ಹಿಂದಿಗಿಂತಲೂ ಕಠಿಣ ನಿಯಮವನ್ನು ಅನುಸರಿಸಲಾಗುತ್ತದೆ ಎಂದೂ ಹೇಳಲಾಗುತ್ತಿದೆ. ದಿನನಿತ್ಯದ ವಸ್ತುಗಳ ಖರೀದಿಗೂ ಸಮಯ ನಿಗದಿ ಮಾಡಿದ್ದು, ದಿನಪೂರ್ತಿ ತರಕಾರಿ, ದಿನಸಿ ಹೆಸರಿನಲ್ಲಿ ಹೊರಗೆ ಬರುವವರನ್ನು ನಿಯಂತ್ರಿಸಲು ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್ ಹಾಗೂ ಇತರ ಇಲಾಖೆಗಳು ಸಜ್ಜಾಗಿವೆ.

ಇದೇ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಯುತ್ತಿರುವ ಜಿಲ್ಲೆಗಳಲ್ಲೂ ಮತ್ತೆ ಲಾಕ್’ಡೌನ್ ಜಾರಿಗೆ ಸರ್ಕಾರ ತೀರ್ಮಾನಿಸಿದೆ.

ಇದನ್ನೂ ಓದಿ.. ಬೆಳಗಾವಿ ಜಿಲ್ಲೆಯಲ್ಲೂ ಕೊರಾನಾ ಸವಾಲು; ಗೋಕಾಕ್ ಮತ್ತು ಮೂಡಲಗಿ ತಾಲೂಕಿನಲ್ಲಿ ಲಾಕ್’ಡೌನ್ 

 

Related posts