ಲಾಕ್ ಡೌನ್’ನಲ್ಲೂ ವಿನಾಯಿತಿ; ಅಗತ್ಯ ವಿಚಾರಗಳಿಗೆ ಅಡಚಣೆಯಿಲ್ಲ

ಬೆಂಗಳೂರು: ಹಿಂದೂಗಳ ಪಾಲಿಗೆ ಹೊಸ ಸಂವತ್ಸರದ ಆರಂಭವೇ ಪ್ರಯಾಸದ ಸನ್ನಿವೇಶವಾಗಿದೆ. ಒಬ್ಬಟ್ಟಿನ ಭೂರಿ ಭೋಜನವಿಲ್ಲ, ಒಪ್ಪೊತ್ತಿನ ಊಟಕ್ಕೂ ಪರದಾಟ. ಕೊರೋನಾ ಕಾರಣಕ್ಕಾಗಿ ಲಾಕ್ ಡೌನ್ ಜಾರಿಗೆ ಬಂದಿರುವುದರಿಂದಾಗಿ ಜನ ಸಾಮಾನ್ಯರು ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

ಲಾಕ್ ಡೌನ್’ನಿಂದಾಗಿ ಜನರು ಮನೆ ಬಿಟ್ಟು ಹೊರಗೆ ಬರಲಾಗದ ಸ್ಥಿತಿಯಲ್ಲಿದ್ದಾರೆ. ಊಟಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯೂ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಅಸಂಘಟಿತ ಕಾರ್ಮಿಕ ಕುಟುಂಬಗಳ ಬದುಕು ತೂಗುಯ್ಯಾಲೆಯಲ್ಲಿದೆ.

ಈ ನಡುವೆ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ಕೇರಳ ಮಾದರಿಯಲ್ಲಿ ಆಹಾರ ಧಾನ್ಯ, ಪರಿಹಾರ ನೀಡುವಂತೆ ಸಾಹಿತಿಗಳು ಹಾಗೂ ಚಿಂತಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಪತ್ರ ಬರೆದಿರುವ ಸಾಹಿತಿಗಳು, ಅಸಂಘಟಿತ ಕಾರ್ಮಿಕ ಕುಟುಂಬಗಳ ಬ್ಯಾಂಕ್ ಖಾತೆಗೆ ಜಿಲ್ಲಾಧಿಕಾರಿ ಮೂಲಕ ತಲಾ 5000 ರೂಪಾಯಿ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸರ್ಕಾರ 1000 ರೂಪಾಯಿ ನೆರವನ್ನು ಘೋಷಿಸಿದೆ. ಅದನ್ನು 3000 ಕ್ಕೆರೂಪಾಯಿಗಳಿಗೆ ಹೆಚ್ಚಿಸಬೇಕೆಂದೂ ಈ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದೆ ವೇಳೆ, ಲಾಕ್ ಡೌನ್ ಸಂದರ್ಭದಲ್ಲಿ, ದಿನ ಬಳಕೆಯ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸುವ ಸಲುವಾಗಿ ದಿನದ 24 ಗಂಟೆ ದಿನಸಿ ಅಂಗಡಿ, ಸೂಪರ್ ಮಾರ್ಕೆಟ್ ತೆರೆಯಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅನುಮತಿ ನೀಡಿದ್ದಾರೆ. ಜನರು ಮುಗಿ ಬೀಳುತ್ತಿರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಗುಂಪು ಸೇರದೆ ತಮಗೆ ಬೇಕಾದ ದ ವಸ್ತುಗಳನ್ನು ಖರೀದಿ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

Related posts