ಕೋಲಾರ ಮಾದರಿಯಾಗಬೇಕು: ಬಿ‌.ಸಿ.ಪಾಟೀಲ್

ಕೋಲಾರ: ಕೋಲಾರ ಜಿಲ್ಲೆಯನ್ನು, ರೈತರ ಆತ್ಮವಿಶ್ವಾಸವನ್ನು ತಾವು ಬಹಳವಾಗಿ ಮೆಚ್ಚಿಕೊಂಡಿದ್ದು, ಕೋಲಾರ ಜಿಲ್ಲೆಯನ್ನು ಕೃಷಿಯಲ್ಲಿ ಮಾದರಿ ಜಿಲ್ಲೆಯನ್ನಾಗಿಸುವ ಗುರಿ ತಮ್ಮದಾಗಿದೆ ಎಂದು ಕೃಷಿ ಸಚಿವ ಬಿ‌.ಸಿ.ಪಾಟೀಲ್ ಹೇಳಿದ್ದಾರೆ.

ಕೋಲಾರದ‌ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಕೃಷಿ ಸಚಿವರು, ಕೋಲಾರ ರೈತರು ಕಡಿಮೆ ಮಳೆ ಕಡಿಮೆ ನೀರಿನಲ್ಲಿಯೂ ಸಮಗ್ರ ಕೃಷಿ ನೀತಿಯನ್ನು ಅಳವಡಿಸಿ ಉತ್ತಮ ಬೆಳೆ ಬೆಳೆದು ಮಾದರಿಯಾಗಿದ್ದಾರೆ.ತಾವು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಕೋಲಾರ ರೈತರು ಸ್ವಾಭಿಮಾನದಿಂದ ಹೇಳಿದ್ದಾರೆ. ಕೋಲಾರ ರೈತರ ಕೃಷಿ ನೀತಿ ಸ್ವಾಭಿಮಾನ ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.

ಮಂಡ್ಯದಲ್ಲಿ ತಾವು ನಡೆಸಿದ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಕೋಲಾರದ ಬಗ್ಗೆಯೇ ತಾವು ಹೆಚ್ಚು ಉಲ್ಲೇಖಿಸಿ ಇಲ್ಲಿನ ರೈತರ ಆತ್ಮವಿಶ್ವಾಸವನ್ನು ಉದಾಹರಣೆಯಾಗಿ ನೀಡಿದ್ದೇನೆ.ಅಲ್ಲದೇ ಹೋದಲೆಲ್ಲಾ ಕೋಲಾರ ರೈತರ ಸಾಧನೆ ಬಗ್ಗೆ ಮಾತನಾಡುತ್ತಿದ್ದೇನೆ. ಕಡಿಮೆ ಮಳೆಯಲ್ಲಿಯೂ ಉತ್ತಮ ಬೆಳೆ ಬೆಳೆಯುವ ಕೋಲಾರ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿದೆ ಎಂದರು.

Related posts