ಯೋಧ ಗುರು ಹೆಸರಲ್ಲಿ ಸ್ಮಾರಕ ; ರಾಜ್ಯ ಸರ್ಕಾರದ ಕ್ರಮ

ಬೆಂಗಳೂರು: ಇದೆ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪುಲ್ವಾಮಾ ದುರಂತದಲ್ಲಿ ವೀರ ಕನ್ನಡಿಗ, ಮಂಡ್ಯಾ ಜಿಲ್ಲೆಯ ಯೋಧ ಗುರು ಕೂಡಾ ಹುತಾತ್ಮರಾಗಿದ್ದರು. ದೇಶಕ್ಕಾಗಿ ಪ್ರಾಣ ತೆತ್ತ ಈ ವೀರ ಯೋಧನ ನೆನಪಿಗಾಗಿ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಸ್ಮಾರಕ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕಳೆದ ವರ್ಷ ಪುಲ್ವಾಮಾ ದಾಳಿಯಲ್ಲಿ 33 ವರ್ಷ ವಯಸ್ಸಿನ ಯೋಧ ಎಚ್. ಗುರು ಹುತಾತ್ಮರಾಗಿದ್ದರು. ಇಡೀ ರಾಜ್ಯವೇ ಈ ಯೋಧನಿಗಾಗಿ ಕಂಬನಿ ಮಿಡಿದಿತ್ತು. ಇದೆ ವೇಳೆ ಹುತಾತ್ಮ ಯೋಧನ ಸ್ಮಾರಕ ನಿರ್ಮಿಸಬೇಕೆಂಬ ಆಗ್ರಹ ಕೂಡಾ ಕೆಳೆಬಂದಿತ್ತು.

ಯೋಧ ಗುರುವಿನ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಕೂಡಾ ಅಸಮಾಧಾನ ಹೊರ ಹಾಕಿದ್ದರು. ಈ ನಡುವೆ ಮಂಡ್ಯದ ಮದ್ದೂರಿನಲ್ಲಿ ಸ್ಮಾರಕ ನಿರ್ಮಿಸಲು ರಾಜ್ಯ ಸರ್ಕಾರ ಮುಂದೆ ಬಂದಿದ್ದು, ಅದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 25 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ.

Related posts