ಕೊಡಗಿನಲ್ಲಿ ಭಾರೀ ಮಳೆ; ಕಾವೇರಿ ತೀಥ೯ಕ್ಷೇತ್ರ ತಲಕಾವೇರಿ ಬಳಿ ಭೂಕುಸಿತ

ಮಡಿಕೇರಿ: ರಾಜ್ಯದ ವಿವಿಧೆಡೆ ಭಾರೀ ಮಳೆಯಾಗಿದ್ದು ಸರಣಿ ಅನಾಹುತಗಳು ಸಂಭವಿಸಿದೆ. ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಭೂ ಕುಸಿತ ಘಟನೆ ಮರುಕಳಿಸಿದೆ.

ಕಾವೇರಿ ತೀಥ೯ಕ್ಷೇತ್ರ ತಲಕಾವೇರಿ ಬಳಿ ಭೂಕುಸಿತ ಸಂಭವಿಸಿದ್ದು, ಎರಡು ಮನೆಗಳು ಸಂಪೂಣ೯ ಮಣ್ಣುಪಾಲಾಗಿವೆ. ತಲಕಾವೇರಿ ಕ್ಷೇತ್ರದ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಅವರ ಪತ್ನಿ, ಆನಂದತೀಥ೯ ಮತ್ತು ಇಬ್ಬರು ಅಚ೯ಕರು ನಾಪತ್ತೆಯಾಗಿದ್ದಾರೆ.

ಮಣ್ಣಿನಡಿ ಸಿಲುಕಿರುವವರ ರಕ್ಷಣೆಗೆ ಸ್ಥಳೀಯರೊಂದಿಗೆ ವಿಪತ್ತು ನಿರ್ವಹಣಾ ಪಡೆ ಕೂಡ ಕಾಯಾ೯ಚರಣೆ ನಡೆದಿದೆ. ಈ ದುರ್ಘಟನೆಯಲ್ಲಿ ಕೆಲವು ವಾಹನಗಳೂ ಮಣ್ಣಿನಡಿ ಸಿಲುಕಿವೆ ಎನ್ನಲಾಗಿದೆ.

ಈ ನಡುವೆ, ಭಾಗಮಂಡಲದ ಭಗಂಡಕ್ಷೇತ್ರ ದ್ವೀಪದಂತಾಗಿದೆ. ಮಳೆ-ಪ್ರವಾಹದಿಂದಾಗಿ ಮಡಿಕೇರಿ-ವೀರಾಜಪೇಟೆಗೆ ರಸ್ತೆಯ ಬೇತ್ರಿ ಸೇತುವೆ ಬಂದ್ ಮಾಡಲಾಗಿದೆ.

Related posts