ಮಹದಾಯಿ ಸ್ಥಳ ಪರಿಶೀಲನೆ ಮಾಡೋಣ; ಗೋವಾಕ್ಕೆ ಕರ್ನಾಟಕ ಆಹ್ವಾನ

ಬೆಳಗಾವಿ: ಮಹದಾಯಿ ನದಿ ನೀರು ತಿರುವು ಮಾಡಲಾಗಿದೆ ಎಂಬ ಗೋವಾ ಆರೋಪವನ್ನು ಕರ್ನಾಟಕ ನಿರಾಕರಿಸಿದೆ. ಈ ಕುರಿತ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರ ಹೇಳಿಕೆಗೆ ಸ್ಪಷ್ಟನೆ ನೀಡಿರುವ ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ರಾಜ್ಯದಿಂದ ಮಹದಾಯಿ ನದಿ ನೀರು ತಿರುವು ಮಾಡಿದರೆ ಸಚಿವ ಸ್ಥಾನಕ್ಕೆ ನಾನೇ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ರಮೇಶ್ ಜಾರಕಿಹೊಳಿ, , ಕರ್ನಾಟಕ ಸರ್ಕಾರ ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ, ಕಳಸಾ ನಾಲಾಗೆ ನಿರ್ಮಾಣವಾಗಿರುವ ತಡೆಗೋಡೆ ಮುಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ನಿಮಗೇನಾದರೂ ಅನುಮಾನ ಇದ್ದಾರೆ ಮಹದಾಯಿ ಸ್ಥಳ ಪರಿಶೀಲನೆ ಮಾಡೋಣ ಎಂದು ಆಹ್ವಾನ ನೀಡಿದ ಸಚಿವ ರಮೇಶ್ ಜಾರಕಿಹೊಳಿ, ಒಂದು ವೇಳೆ ಸಾವಂತ್ ಅವರ ಆರೋಪ ಸಾಬೀತಾದರೆ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದರು

Related posts