ಮಂಗಳೂರು ವೆಂಕಟರಮಣ ದೇವಳದಲ್ಲಿ ‘ಮುಕ್ಕೋಟಿ ದ್ವಾದಶಿ’ ಸಂಭ್ರಮ

ಮಂಗಳೂರು : ಕರಾವಳಿಯ ಪುಣ್ಯಕ್ಷೇತ್ರಗಳಲ್ಲೊಂದಾದ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ‘ಮುಕ್ಕೋಟಿ ದ್ವಾದಶಿ’ ಉತ್ಸವ ಗಮನಸೆಳೆಯಿತು.

ಶುಕ್ರವಾರ ವೈಕುಂಠ ಏಕಾದಶಿ ವೈಭವದ ನಂತರ ಶನಿವಾರ ಈ ಕೈಂಕರ್ಯ ನೆರವೇರಿತು. ಇಂದು ಪ್ರಾತಃಕಾಲ ಶ್ರೀನಿವಾಸ ದೇವರ ಪಲ್ಲಕಿ ಉತ್ಸವವು ಭಕ್ತಸಮೂಹದ ಕಣ್ಮನ ಸೆಳೆಯಿತು.

ಶ್ರೀ ದೇವಳದಿಂದ ಟ್ಯಾಂಕ್ ಕಾಲೋನಿಯಲ್ಲಿರುವ ಶ್ರೀ ದೇವರ ಕೆರೆಯಲ್ಲಿ ತೀರ್ಥ ಸ್ನಾನ ಬಳಿಕ ಶ್ರೀ ದೇವರ ಸ್ವಯಂಸೇವಕರ ಭುಜ ಸೇವೆಯೊಂದಿಗೆ, ಶ್ರೀ ವೀರ ವೆಂಕಟೇಶ್ ಭಜನಾ ಮಂಡಳಿಯ ಸೇವಕರು ಭಜನಾ ಸೇವೆಯೊಂದಿಗೆ  ಹಗಲು ಪೇಟೆ ಉತ್ಸವ ಜರಗಿತು .

ದೇವಳದ ಆಡಳಿತ ಮಂಡಳಿಯ ಸಿ .ಎಲ್ ಶೆಣೈ, ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು .

Related posts