ಕಾನೂನಿನ ವ್ಯಾಪ್ತಿಯಲ್ಲಿ ಗಣಿಗಾರಿಕೆ ಸಕ್ರಮ; ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು: ಸಣ್ಣ ಗಣಿಗಾರಿಕೆ ನಡೆಸುವವರು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಆದಾಲತ್ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತೀರ್ಮಾನಿಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.

ವಿಕಾಸಸೌದದಲ್ಲಿ ಸುದ್ದಿಗೋಷ್ಡಿ ನಡೆಸಿದ ಅವರು, ರಾಜ್ಯದ ಐದು ಕಂದಾಯ ವಿಭಾಗಗಳಾದ , ಮೈಸೂರು, ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿ – ಧಾರವಾಡದಲ್ಲಿ ಆದಾಲತ್ ನಡೆಸಲಾಗುವುದೆಂದು ನಿರಾಣಿ ಅವರು ತಿಳಿಸಿದರು. ಸಣ್ಣ ಗಣಿಗಾರಿಕೆ ಮಾಡುವವರಿಗೆ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗಿತ್ತು. ಕೈಗಾರಿಕಾ ಸಚಿವನಾಗಿದ್ದಾಗ ಕೈಗಾರಿಕಾ ಅದಾಲತ್ ಮಾಡಿದ ಮಾದರಿಯಲ್ಲಿ ಅದಾಲತ್ ಮಾಡಲು ತೀರ್ಮಾನಿಸಲಾಗಿದೆ.ಇಲಾಖಾವಾರ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಆದಾಲತ್ ನಡೆಸುವುದರಿಂದ ಶೇ 75 ರಷ್ಟು ಸಮಸ್ಯೆಗಳು ಸ್ಥಳೀಯವಾಗಿ ಇತ್ಯರ್ಥವಾಗುತ್ತವೆ. ಗಣಿಕಾರಿಕೆಗೆ ಅನುಮತಿ ಪಡೆಯಲು ಬೆಂಗಳೂರು ವರೆಗೂ ಬರುವ ಅವಶ್ಯಕತೆ ಇಲ್ಲ. ಮರಳು, ಕಲ್ಲಿಕಲ್ಲು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಕಾನುನು ಪ್ರಕಾರ ದೊರೆಯುವಂತೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಇನ್ನು ಮುಂದೆ 5 ವಿಭಾಗದಲ್ಲಿ 15 ದಿನಕ್ಕೊಮ್ಮೆ ಗಣಿ ಅಕ್ರಮ,ಸಕ್ರಮದ ಬಗ್ಗೆ ಅದಾಲತ್ ನಡೆಸುತ್ತೇವೆ.ಇದರಿಂದಾಗಿ ಶೇ 70 ರಷ್ಟು ಸಮಸ್ಯೆ ಪರಿಹಾರವಾಗುತ್ತದೆ.ಗಣಿಕಾರಿಗೆ ನಡೆಸಲು ‌ ಹತ್ತಾರು ಅನುಮತಿಗಳು ಬೇಕಾಗುತ್ತದೆ.ಅಧಿವೇಶನ ಮುಗಿದ ನಂತರ ಈ ಅದಾಲತ ಪ್ರಾರಂಭವಾಗಲಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಗಣಿಗಾರಿಕೆ ನಡೆಸುವುದು ಅನಿವಾರ್ಯ.ಕೈಗಾರಿಕೆಗಳಿಗೆ ಇವು ಅತ್ಯವಶ್ಯಕವೂ ಹೌದು.ಕಾನೂನಿನ ವ್ಯಾಪ್ತಿಯಲ್ಲಿ ಸಕ್ರಮ ಮಾಡುವ ಪ್ರಯತ್ನ ಮಾಡಲಾಗುವುದು‌.ಇದಕ್ಕಾಗಿ ಹೊಸ ನಿಯಮಗಳನ್ನು ಜಾರಿ ಮಾಡುವುದಾಗಿ ಹೇಳಿದರು. ಬೇರೆ ರಾಜ್ಯಕ್ಕಿಂತ ಹೆಚ್ಚು ಅದಿರು ನಮ್ಮಲ್ಲಿದೆ.ಇದರ ಸದುಪಯೋಗ ನಾವು ಮಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಹದ್ದಿನ ಗುಡ್ಡ ಮೈನಿಂಗ್ ಏರಿಯಾ ಪ್ರದೇಶದಲ್ಲಿ ಹೆಚ್ಚಿನ ಗಣಿಗಾರಿಕೆಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇಲ್ಲಿ ಸುಮಾರು 156 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಇದೆ ಎಂದು ವಿವರಿಸಿದರು. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗಳ ಬಗ್ಗೆ ಮಾಹಿತಿ.ಇದೆ ರಾಜ್ಯದಲ್ಲಿ ಎಷ್ಟು ಅಕ್ರಮ ಗಣಿಗಾರಿಕೆ. ನಡೆಯುತ್ತಿದೆ ಎನ್ನುವುದನ್ನು ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಅಕ್ರಮ ಗಣಿಗಾರಿಕೆ ನಡೆಸಿದವರ ಪಟ್ಟಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

Related posts