ನಿಲ್ಲದ ಕೊರೋನಾ ರೋದನ.. ಮತ್ತೆ 42 ಹೊಸ ಕೇಸ್.. ಏನಿದು ಅಜ್ಮಿರ್ ಕಥೆ?

ಬೆಂಗಳೂರು: ಕೊರೋನಾ ಕಾರಣಕ್ಕಾಗಿ ರಾಜ್ಯವೇ ನಲುಗಿಹೋಗಿದೆ. ಜನರ ರೋದನ ಮುಂದುವರಿದಿದ್ದು ಮತ್ತೆ ಮತ್ತೆ ಆತಂಕದ ಸುದ್ದಿಗಳೇ ಮಾರ್ದನಿಸುತ್ತಿದೆ. ಇದೀಗ ಮತ್ತೆ ಕಳವಳಕಾರಿ ಮಾಹಿತಿ ಹೊರಬಿದ್ದಿದ್ದು ಹೊಸದಾಗಿ 42 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿ ಈ ಮಹಾಮಾರಿ ವೈರಸ್ ಹಾವಳಿ ದಿನೇ ದಿನೇ ಆತಂಕ ಹೆಚ್ಚಿಸಿದೆ. ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನವರೆಗಿನ ಕೊರೋನಾ ಬೆಳವಣಿಗೆ ಕುರಿತ ಮಾಹಿತಿಯನ್ನೊಳಗೊಂಡ  ಹೆಲ್ತ್ ಬುಲೆಟಿನ್‌ನಲ್ಲಿ 42 ಹೊಸ ಸೋಂಕಿತರ ಪಟ್ಟಿಯನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ.. ಖಡಕ್ ಅಧಿಕಾರಿ ವರ್ಗಾವಣೆ; ಒತ್ತಡಕ್ಕೆ ಮಣಿಯಿತೇ ಸರ್ಕಾರ?

ಹೊಸ ಕೋವಿಡ್-19 ಪ್ರಕರಣಗಳು ಪತ್ತೆ ಮೂಲಕ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ. ಈ ಹೊಸ ಪಟ್ಟಿಯಲ್ಲಿ ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಯಲ್ಲಿ ಈ ಹಿಂದಿಗಿಂತಲೂ ಹೆಚ್ಚು ಪ್ರಕರಣ ಪತ್ತೆಯಾಗಿರುವುದನ್ನು ಉಲ್ಲೇಖಿಸಲಾಗಿದೆ.

  • ಬಾಗಲಕೋಟೆ – 15 ಕೇಸ್
  • ಧಾರವಾಡ – 9 ಕೇಸ್
  • ಹಾಸನ – 5 ಕೇಸ್
  • ಬೆಂಗಳೂರು ನಗರ – 3 ಕೇಸ್
  • ದಕ್ಷಿಣಕನ್ನಡ – 2 ಕೇಸ್
  • ಯಾದಗಿರಿ – 2 ಕೇಸ್
  • ಬೀದರ್ – 2 ಕೇಸ್
  • ಬಳ್ಳಾರಿ – 1 ಕೇಸ್
  • ಚಿಕ್ಕಬಳ್ಳಾಪುರ – 1 ಕೇಸ್
  • ಮಂಡ್ಯ – 1 ಕೇಸ್
  • ಕಲಬುರ್ಗಿ – 1 ಕೇಸ್

ರಾಜ್ಯದಲ್ಲಿ ಈವರೆಗೂ 904 ಮಂದಿಯಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದು, ಈ ಪೈಕಿ 426 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 31 ಮಂದಿ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ ಎಂದು ಈ ಹೆಲ್ತ್ ಬುಲೆಟಿನ್’ನಲ್ಲಿ ಸರ್ಕಾರ ಮಾಹಿತಿ ಬಹಿರಂಗಪಡಿಸಿದೆ.

ಇದನ್ನೂ ಓದಿ.. ನಾಳೆಯಿಂದ ಭಾರೀ ವರ್ಷಧಾರೆ; ಮೇ 15,16 ರಂದು ಬಿರುಗಾಳಿ ಮಳೆ ಆತಂಕ 

 

Related posts