ರಾಜ್ಯದಲ್ಲಿ ವೈರಾಣು ಸವಾರಿ; ಮತ್ತೆ 34 ಹೊಸ ಕೊರೋನಾ ಕೇಸ್

ಬೆಂಗಳೂರು: ಚೀನಾ ವೈರಾಣು ಸವಾರಿ ಮುಂದುವರಿದಿದ್ದು ಕರುನಾಡಲ್ಲೂ ಆತಂಕ ಆವರಿಸಿದೆ. ಕರ್ನಾಟಕವನ್ನು ದಿನೇ ದಿನೇ ನಲುಗಿಸುತ್ತಿರುವ ಕೊರೋನಾ ವೈರಸ್ ಕಳೆದ 24 ಗಂಟೆಯಲ್ಲಿ ಮತ್ತೆ 34 ಮಂದಿಯನ್ನು ಅಪ್ಪಿಕೊಂಡಿದೆ. ಈ ಮೂಲಕ ಕರುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 959ಕ್ಕೆ ಏರಿಕೆಯಾಗಿದೆ.

ಮಂಗಳವಾರ ಸಂಜೆ ನಂತರ ರಾಜ್ಯದಲ್ಲಿ ಮತ್ತೆ ಇಬ್ಬರು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆಂಬ ಆಘಾತಕಾರಿ ಸುದ್ದಿಯೂ ಅಪ್ಪಳಿಸಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, ಮಂಗಳೂರಿನಲ್ಲೂ ಒಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ರಾಜ್ಯದ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್’ನಲ್ಲಿ ಸೋಂಕಿತರ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದೆ.

  • ಬೀದರ್’ನಲ್ಲಿ 12 ಹೊಸ ಕೇಸ್ 
  • ಕಲಬುರಗಿಯಲ್ಲಿ 8 ಹೊಸ ಕೇಸ್ 
  • ಹಾಸನದಲ್ಲಿ 4 ಹೊಸ ಕೇಸ್ 
  • ಬೆಂಗಳೂರು ನಗರದಲ್ಲಿ 2 ಹೊಸ ಕೇಸ್ 
  • ಉತ್ತರ ಕನ್ನಡದಲ್ಲಿ 2 ಹೊಸ ಕೇಸ್ 
  • ದಾವಣಗೆರೆಯಲ್ಲಿ 2 ಹೊಸ ಕೇಸ್ 
  • ವಿಜಯಪುರದಲ್ಲಿ 2 ಹೊಸ ಕೇಸ್ 
  • ದಕ್ಷಿಣ ಕನ್ನಡದಲ್ಲಿ 1 ಹೊಸ ಕೇಸ್ 
  • ಬಳ್ಳಾರಿಯಲ್ಲಿ 1 ಹೊಸ ಕೇಸ್ 

ಈ ನಡುವೆ ರಾಜ್ಯದಲ್ಲಿ 959 ಸೋಂಕಿತರ ಪೈಕಿ ಇಲ್ಲಿಯವರೆಗೆ 451 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತನ್ನ ಹೆಲ್ತ್ ಬುಲೆಟಿನ್’ನಲ್ಲಿ ತಿಳಿಸಿದೆ.

ಇದನ್ನೂ ಓದಿ.. ಕೈಗಾರಿಕೆಗಳಷ್ಟೇ ಅಲ್ಲ, ‘ಮೋದಿ ಮನಿ’ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ..

 

Related posts