ಮರ್ಕಜ್ ಧಾರ್ಮಿಕ ಸಭೆ; 122 ಮಲೇಷಿಯನ್ನರಿಗೆ ಜಾಮೀನು

ದೆಹಲಿ: ದೇಶದಲ್ಲಿ ಕೊರೋನಾ ಹಾವಳಿ ಮುಂದುವರಿದಿದ್ದು ಆತಂಕದ ಪರಿಸ್ಥಿತಿ ತಲೆದೋರಿದೆ. ಕೊರೋನಾ ಹಾವಳಿ ಆರಂಭದಲ್ಲಿ ನಡೆದಿದ್ದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆ ವಿವಾದಗಳ ಕೇಂದ್ರ ಬಿಂದುವಾಗಿತ್ತು. ಆ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳ ಮಂದಿ ಪಾಲ್ಗೊಂಡಿದ್ದು ನಿಯಮ ಉಲ್ಲಂಘಿಸಿ ನಡೆದ ಆ ಕಾರ್ಯಕ್ರಮ ಸೋಂಕು ಹರಡಲು ಕಾರಣವಾಗಿತ್ತು ಎಂದು ಆರೋಪಿಸಲಾಗಿತ್ತು.

ಕೇಂದ್ರ ಸರ್ಕಾರ ವಿಧಿಸಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ 122 ಮಲೇಷಿಯನ್ನರಿಗೆ ಜಾಮೀನು ಮಂಜೂರಾಗಿದೆ. ದೆಹಲಿಯ ಚೀಫ್ ಮೆಟ್ರೋಪಾಲಿಟನ್ ನ್ಯಾಯಾಧೀಶರು ಮಲೇಷಿಯನ್ನರಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಇದೇ ವೇಳೆ ತಮ್ಮಿಂದ ತಪ್ಪಾಗಿದ್ದು ಶಿಕ್ಷೆಯ ಅವಧಿ ಕಡಿಮೆ ಮಾಡಿಸಬೇಕೆಂದು ಆರೋಪಿಗಳು ನ್ಯಾಯಾಲಯವನ್ನು ಕೋರಿದ್ದಾರೆ. ಈ ಸಂಬಂಧದ ವಿಚಾರಣೆಯನ್ನು ಕೋರ್ಟ್ ಬುಧವಾರ ನಡೆಸುವುದಾಗಿ ಹೇಳಿದೆ.

Related posts