‘ನಿನ್ನ ಪ್ರೀತಿ ಬೇಕಿದೆ’ ಯುವಜನರಲ್ಲಿ ಸಂಚಲನ ಮೂಡಿಸಿದ ಆಲ್ಬಂ ಸಾಂಗ್

ಪ್ರಸ್ತುತ ಸ್ಯಾಂಡಲ್‌ವುಡ್, ಬಾಲಿವುಡ್‌ಗಳಲ್ಲಿ ಡ್ರಗ್ ಮಾಫಿಯಾದ ಕರ್ಕಶ ಧ್ವನಿ ಮಾರ್ಧನಿಸುತ್ತಿದೆ. ಇದೇ ಹೊತ್ತಿಗೆ ವ್ಯಸನಮಕ್ತ ಸಮಾಜ ನಿರ್ಮಾಣದ ಅನಿವಾರ್ಯತೆ ಬಗ್ಗೆಯೂ ಸಾಲು ಸಾಲು ಸಲಹೆಗಳು ಕೇಳಿಬರುತ್ತಿವೆ.

ಇದೇ ಸಂದರ್ಭದಲ್ಲಿ ಕರಾವಳಿಯ ಹುಡುಗರು ಡ್ರಗ್ ಹಾವಳಿ ಮತ್ತು ವ್ಯಸನ ಸಮಾಜಿಕ ಸ್ವಾಸ್ಥ್ಯಕ್ಕೆ ಯಾವ ರೀತಿ ಸವಾಲಾಗಿದೆ ಎಂಬುದನ್ನು ಹಾಡಿನ ಮೂಲಕ ಸಾರಿದ್ದಾರೆ.

‘ನಿನ್ನ ಪ್ರೀತಿ ಬೇಕಿದೆ’ ಎಂಬ ಆಲ್ಬಂ ಸಾಂಗ್ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಆದ ಕೆಲವೇ ತಾಸುಗಳಲ್ಲಿ ಸಾವಿರಾರು ಮಂದಿಯ ಚಿತ್ತ ಸೆಳೆದಿದೆ. ಬಹಳಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿರುವುದು ವಿಶೇಷ.

‘ಟೀಮ್ ಶ್ಲಾಘನಾ’ ಹೆಸರಲ್ಲಿ ಅಶೋಕ್ ಆಂಚನ್, ಪ್ರಣೀತ್ ಸುವರ್ಣ ಮೊದಲಾದವರು ಈ ಹಾಡಿನ ಹಿಂದಿನ ಯುವ ಪ್ರತಿಭೆಗಳು.

‘ಕನಸು ಮಾರಾಟಕ್ಕಿದೆ’ ಚಿತ್ರದ ನಿರ್ದೇಶಕ ಸ್ಮಿತೇಶ್ ಎಸ್ ಬಾರ್ಯ ಅವರು ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.

 

 

Related posts