ಸಂತೋಷ್ ಆತ್ಮಹತ್ಯೆಯತ್ನ ಪ್ರಕರಣ; ವೀಡಿಯೋ ಬಿಡುಗಡೆ ಮಾಡಿ; ಕಾಂಗ್ರೆಸ್’ಗೆ ಬಿಜೆಪಿ ಸವಾಲು

ಬೆಳಗಾವಿ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ವೀಡಿಯೋವೊಂದು ಕಾರಣ ಎಂದಿರುವ ಡಿಕೇಶಿ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಮುಠ್ಠಾಳತನದ್ದು, ಈ ರೀತಿ ಹೇಳಿಕೆ ಕೊಡೋಕೆ ಡಿ.ಕೆ.ಶಿವಕುಮಾರ್ ಗೆ ನಾಚಿಕೆ ಆಗಬೇಕು ಎಂದಿದ್ದಾರೆ.

ವಿಡಿಯೊ ಲೀಕ್ ಆಗಿದೆ ಅಂದರೆ ವಿಡಿಯೊ ಇವರ ಹತ್ತಿರ ಇರಬೇಕಲ್ಲ. ನಿಮ್ಮಲ್ಲಿದ್ದರೆ ಬಿಡುಗಡೆ ಮಾಡಿ ಎಂದು ಡಿಕೆಶಿಗೆ ಈಶ್ವರಪ್ಪ ಸವಾಲು ಹಾಕಿದರು. ಏನೇ ಅಪಾದನೆ ಮಾಡಬೇಕು ಅಂದರೆ ದಾಖಲೆ ಬೇಕು ಎಂದ ಈಶ್ವರಪ್ಪ, ಎಂಎಲ್ಎ ಯಾರು, ಎಂಎಲ್ಸಿ ಯಾರು, ಮಂತ್ರಿ ಯಾರು ಅಂತಾ ಹೇಳಲಿ. ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದರು.

Related posts