ಪಂಚಾಯ್ತಿ ಫಲಿತಾಂಶ; ನಾಯಕರಿಂದ ಅಭಿನಂಧನೆ

ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಗೆಲುವು ಸಾಧಿಸಿರುವ ಜೆಡಿಎಸ್ ಅಭ್ಯರ್ಥಿಗಳಿಗೆ ಪಕ್ಷದ ನಾಯಕ ಬಾಗೇಗೌಡರು ಆಭಿನಂದನೆ ಸಲ್ಲಿಸಿದ್ದಾರೆ.

ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ನಾಯಕರ ಮೂಲಕ ಜನರಿಗೆ ನೀಡಿರುವ ಭರವಸೆ ಈಡೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತದಾರರಿಗೂ ಜೆಡಿಎಸ್ ನಾಯಕ ಬಾಗೇಗೌಡರು ತಮ್ಮದೇ ಶೈಲಿಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ಫಲಿತಾಂಶ ಕುರಿತಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಬಾಗೇಗೌಡರು, ಪಂಚಾಯ್ತಿಯಲ್ಲಿನ ಗೆಲುವೇ ಸಮಾಜ ಪರಿವರ್ತನಾ ಕಾರ್ಯಕ್ಕೆ ವೇದಿಕೆಯಾಗಿರುತ್ತದೆ. ಗ್ರಾಮದಲ್ಲೇ ರಾಮರಾಜ್ಯ ಕಟ್ಟುವ ಕೆಲಸ ಮಾಡಲು ನಿಮಗೆ ಅವಕಾಶ ಸಿಕ್ಕಿದ್ದು ಜನಹಿತ ಕೆಲಸದಲ್ಲಿ ಯಶಸ್ವಿಯಾಗಿ ಎಂದು ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ವೇಳೆ, ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಜನಸೇವೆಯ ಅವಕಾಶ ದೂರವಾಗಿದೆ ಎಂದು ತಿಳಿಯಬಾರದು. ಅನೇಕ ರಾಷ್ಟ್ರ ನಾಯಕರೂ ಸೋತು ಗೆದದವರೇ ಆಗಿದ್ದಾರೆ ಎಂದು ಅವರು ವೀರೋಚಿತ ಸೋಲುಂಡವರಿಗೆ ಸಾಂತ್ವಾನ ಹೇಳಿದ್ದಾರೆ.

ನೂತನ ವರ್ಷವನ್ನು ಸಂತಸದಿಂದಲೇ ಸ್ವಾಗತಿಸೋಣ ಎಂದು ಬಾಗೇಗೌಡರು ನಾಡಿನ ಜನತೆಗೆ ಹೊಸವರ್ಷದ ಶುಭಾಶಯ ಕೋರಿದ್ದಾರೆ

Related posts