ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್‌ ಅವರೇ ಹೀರೋ.. ಮುಗಿಲೆತ್ತರ ರಾಚಿದ ಬೆಂಬಲಿಗರ ಸಂಭ್ರಮ

ಮಂಗಳೂರು: ಕರಾವಳಿಯಲ್ಲಿ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಮತ್ತೊಮ್ಮೆ ಹೀರೋ ಆಗಿ ಹೊರಹೊಮ್ಮಿದ್ದಾರೆ. ಹೀಗೆಂದು ಘೋಷಣೆ ಮೊಳಗುತ್ತಿರುವುದು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ.

ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಡೆ ಕಮಲ ಕಾರ್ಯಕರ್ತರೇ ಪಾರುಪತ್ಯ ಸಾಧಿಸಿದ್ದಾರೆ.

ಬಂಟ್ವಾಳ ಕ್ಷೇತ್ರದಲ್ಲಿ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಸಮರದ ಅಖಾಡದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದ್ದರು. ಮತದಾರರ ಮಹಾತಿರ್ಪು ಕೂಡಾ ಈ ಶಾಸಕರ ಬೆಂಬಲಿಗರ ಪರವಾಗಿಯೇ ಬಂದಿದ್ದು ಕರಾವಳಿಯಲ್ಲಿ ಕೇಸರಿ ಪಾಳಯದ ಗೆಲುವಿನ ಸಂಭ್ರಮ ಮುಗಿಲೆತ್ತರ ರಾಚಿದೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿನ 39 ಪಂಚಾಯತ್‌ಗಳ ಪೈಕಿ 20 ಕಡೆ
ಬಿಜೆಪಿ ಬೆಂಬಲಿಗರ ಗುಂಪು ನಿಚ್ಚಲ ಬಹುಮತ ಪಡೆದಿವೆ. ಕಾಂಗ್ರೆಸ್ ಬೆಂಬಲಿಗರ ಪಾರುಪತ್ಯ 12 ಪಂಚಾಯತ್‌ಗಳಿಗಷ್ಟೇ ಸೀಮಿತವಾಗಿದೆ. 4 ಪಂಚಾಯತ್‌ಗಳಲ್ಲಿ ಕೈ-ಕಮಲ ಬೆಂಬಲಿಗರ ನಡುವೆ ಸಮಬಲದ ಫಲಿತಾಂಶ ವ್ಯಕ್ತವಾಗಿದ್ದು, 3 ಪಂಚಾಯತ್‌ಗಳಲ್ಲಿ ಅತಂತ್ರ ಫಲಿತಾಂಶ ವ್ಯಕ್ತವಾಗಿದೆ.

ಸುಮಾರು 12 ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಬೆಂಬಲಿಗರೇ ಆಯ್ಕೆಯಾಗಿಲ್ಲ ಎಂಬುದು ಕುತೂಹಲಕಾರಿ ಬೆಳವಣಿಗೆಯಾಗಿದೆ

Related posts