ರುಚಿಯಾದ ಪಪ್ಪಾಯ ಲಡ್ಡು ತಯಾರಿ ಬಲು ಸುಲಭ

ಪಪ್ಪಾಯ ಕೇವಲ ಹಣ್ಣಷ್ಟೆ ಅಲ್ಲ. ಅದು ಔಷಧಿ ಕೂಡಾ ಹೌದು. ಜ್ಯುಸ್ ಅಥವಾ ಸಲಾಡ್’ಗೆ ಉಪಯುಕ್ತ ಅಂದುಕೊಂಡಿರುವ ಪಪ್ಪಾಯದಿಂದ ಸಿಹಿತಿಂಡಿ ಮಾಡಲೂ ಸಾಧ್ಯವಿದೆ. ಅದರಲ್ಲೂ ಪಪ್ಪಾಯ ಲಡ್ಡು ತಯಾರಿ ಬಲು ಸುಲಭ..

ಬೇಕಾದ ಸಾಮಾಗ್ರಿ

  • ಪಪ್ಪಾಯ ರಸ 2 ಕಪ್
  • ಉಪ್ಪು ಒಂದು ಚಿಟಿಕೆ
  • ತೆಂಗಿನಕಾಯಿ ಹುಡಿ 1 ವರೆ ಕಪ್
  • ತುಪ್ಪ 5 ಚಮಚ
  • ಏಲಕ್ಕಿ ಪುಡಿ 1 ಚಮಚ
  • ಕಾರ್ನ್ ಹುಡಿ 1 ಚಮಚ

ಮಾಡುವ ವಿಧಾನ

ಮೊದಲಿಗೆ ಪಪ್ಪಾಯ ಸಿಪ್ಪೆ ಮತ್ತು ಬೀಜ ತೆಗೆದು ತುಂಡು ಮಾಡಿಕೊಳ್ಳಬೇಕು. ಒಂದು ಜಾರಿನಲ್ಲಿ ತುಂಡು ಮಾಡಿಕೊಂಡ ಪಪ್ಪಾಯ ಹಾಕಿ ನುಣ್ಣಗೆ ರುಬ್ಬಿಕೊಂಡಾಗ ರಸ ಸಿದ್ಧವಾಗುತ್ತದೆ. ನಂತರ ಒಂದು ಕಾಡಾಯಿ ಅಥವಾ ಬಾಣಲೆಯಲ್ಲಿ ಪಪ್ಪಾಯ ರಸ ಹಾಕಿ 5 ರಿಂದ 10 ನಿಮಿಷಗಳ ಕಾಲ ಇಡಬೇಕು. ಅದಕ್ಕೆ ಒಂದು ಚಿಟಿಕೆ ಉಪ್ಪು, ತೆಂಗಿನ ಹುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷ ಇಡಿ. ಆಮೇಲೆ ಅದಕ್ಕೆ ಕಾರ್ನ್ ಹುಡಿಯ ನೀರು, ಏಲಕ್ಕಿ ಪುಡಿ, ತುಪ್ಪ ಹಾಕಿ ಕಲಸುತ್ತ ಬನ್ನಿ. ತಳ ಬಿಡುವಾಗ ಗೋಡಂಬಿಯನ್ನು ಹಾಕಿ ಕಲಸುತ್ತ 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಇಡಿ. ನಂತರ ಅದನ್ನು ತಣ್ಣಗಾದ ಮೇಲೆ ಉಂಡೆ ಕಟ್ಟಿ ತೆಂಗಿನಹುಡಿಯ ಮೇಲೆ ಹೊರಳಿಸಿದರೆ ರುಚಿಯಾದ ಪಪ್ಪಾಯ ಲಡ್ಡು ಸಿದ್ಧವಾಗುತ್ತದೆ.  (ಪಾಪ್ಪಯ ಸಿಹಿ ಇಲ್ಲದಿದ್ದರೆ ಸಕ್ಕರೆ ಹಾಕಬೇಕು)

 

ಇದನ್ನೂ ಮಾಡಿ ನೋಡಿ.. ಬದನೆ ಸುಟ್ಟು ಗೊಜ್ಜು ಮಾಡುವ ವಿಧಾನ 

 

Related posts