ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿ; ಯಶೋಗಾಥೆ ಬರೆದ ವೈದ್ಯರಿಗೆ ಅಭಿನಂದನೆ

ಹುಬ್ಬಳ್ಳಿ: ಕೊರೋನಾ ವೈರಾಣು ಮರಣ ಮೃದಂಗವನ್ನೇ ಭಾರಸುತ್ತಿದ್ದು, ಈ ಕಿಲ್ಲರ್ ವರಸ್ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ರಾಮಬಾಣವೇ ಎಂಬ ಚರ್ಚೆ ಸಾಗಿದೆ. ಈ ಬಗ್ಗೆ ಅನೇಕರು ಅಪಸ್ವರ ಎತ್ತಿದ್ದರಿಂದ ಸರ್ಕಾರ ಕೂಡಾ ಹಿಂದೇಟು ಹಾಕುವ ಚಿಂತನೆ ನಡೆಸಿತು. ಆದರೆ ಇದೀಗ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನ ಮೂಲಕ ಹುಬ್ಬಳ್ಳಿಯ ವೈದ್ಯರು ಯಶೋಗಾಥೆ ಬರೆದಿದ್ದಾರೆ.

ರಾಜ್ಯದದಲ್ಲಿ ಪ್ರಥಮ ಬಾರಿಗೆ ಕೊರೋನಾವರಸ್ ಸೋಂಕಿಗಾಗಿ ನಡೆಸಲಾದ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನ ಯಶಸ್ವಿಯಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 64 ವರ್ಷದ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖರಾಗಿದ್ದಾರೆ.

ಈ ಸಾಧನೆ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ, ಈ ಹಿಂದೆ ಚಿಕಿತ್ಸೆ ಪಡೆದು ಗುಣಮುಖರಾದ ಕೋವಿಡ್-19 ಸೋಂಕಿತ ವ್ಯಕ್ತಿಯಿಂದ ಪಾಸ್ಮಾ ಪಡೆದು ಮುಂಬೈನಿಂದ ಆಗಮಿಸಿದ್ದ 64 ವರ್ಷದ ವ್ಯಕ್ತಿಗೆ ಅಳವಡಿಸಿ ಚಿಕಿತ್ಸೆ ನೀಡಲಾಗಿದೆ. ಪ್ಲಾಸ್ಮಾ ಥೆರಪಿ ಚಿಕಿತ್ಸೆಗೊಳಗಾದ ವ್ಯಕ್ತಿ ಗುಣಮುಖರಾಗಿದ್ದಾರೆ ಎಂದು ವಿವರಿಸಿದರು.

ಈ ಕುರಿತಂತೆ ಆರೋಗ್ಯ ಸಚಿವ ಶ್ರೀರಾಮುಲು ಕೂಡಾ ಟ್ವೀಟ್ ಮಾಡಿದ್ದು, ಪ್ಲಾಸ್ಮಾ ಥೆರಪಿ ಮೂಲಕ ಯಶಸ್ವೀ ಚಿಕಿತ್ಸೆ ನೀಡಿದ ವೈದ್ಯರನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ.. ಸಂಶೋಧಕರ ಯಶೋಗಾಥೆ; ಕಿಲ್ಲರ್ ಕೊರೋನಾಗೆ ಔಷಧಿ ಸಿದ್ದ 

 

Related posts