ಪ್ರಧಾನಿ ಕರೆಗೆ ಓ ಗೊಟ್ಟ ಜನ; ಪಿಎಂ ಕೇರ್ಸ್ ಫಂಡ್’ಗೆ ದೇಣಿಗೆಯ ಮಹಾಪೂರ

ದೆಹಲಿ: ಜಗತ್ತಿನಾದ್ಯಂತ ಪಸರಿಸಿರುವ ಕೋವಿಡ್-19 ವೈರಾಣು ಕಾರಣಕ್ಕಾಗಿ ಇಡೀ ದೇಶವೇ ಸ್ತಬ್ಧಗೊಂಡಿದೆ. ಅಷ್ಟೇ ಅಲ್ಲ ಆರ್ಥಿಕ ವ್ಯವಸ್ಥೆಗೂ ಬಲವಾದ ಹೊಡೆತ ನೀಡಿದ್ದು, ಇಡೀ ವ್ಯವಸ್ಥೆಯೇ ಕುಸಿದುಬಿದ್ದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೊರೋನಾ ನಿಯಂತ್ರಣ ವಿಚಾರದಲ್ಲಿ ಸಮಾರಾ ಸಜ್ಜಿನಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಇದೆ ವೇಳೆ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಇಡೀ ದೇಶವೇ ಕೈ ಜೋಡಿಸಿದ್ದು, ಪ್ರಧಾನಮಂತ್ರಿ ತುರ್ತು ಪರಿಸ್ಥಿತಿ ನಿಧಿ – ಪಿಎಂ ಕೇರ್ಸ್ ಫಂಡ್’ಗೆ ದೇಣಿಗೆಯ ಮಹಾಪೂರವೇ ಹರಿದುಬಂದಿದೆ. ಕೇವಲ ಮೂರು ದಿನಗಳಲ್ಲಿ ಸುಮಾರು ಏಳುವರೆ ಸಾವಿರ ಕೋಟಿ ರೂಪಾಯಿ ಹಣ ಪಿಎಂ ಕೇರ್ಸ್ ಫಂಡ್’ಗೆ ಜಮೆಯಾಗಿದೆ.

ಮಾರ್ಚ್ 28ರಂದು ಪಿಎಂ ಕೇರ್ಸ್ ಫಂಡ್ ರಚಿಸಿತ್ತು.ಈ ನಿಧಿಗೆ ಉದಾರವಾಗಿ ದೇಣಿಗೆ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದೆ.
ಉದ್ಯಮಿಗಳು, ಬಾಲಿವುಡ್ ತಾರೆಯರು, ಕ್ರೀಡಾಪಟುಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾರೀ ಮೊತ್ತದ ದೇಣಿಗೆ ನೀಡಿದ್ದಾರೆ.

  • ಟಾಟಾ ಗ್ರೂಪ್ 1,500 ಕೋಟಿ ರೂಪಾಯಿ
  • ರಿಲಯನ್ಸ್ ಇಂಡಸ್ಟ್ರೀಸ್ 500 ಕೋಟಿ ರೂಪಾಯಿ
  • ಒಎನ್‍ಜಿಸಿ 300 ಕೋಟಿ ರೂಪಾಯಿ
  • ಭಾರತೀಯ ರೈಲ್ವೆ 151 ಕೋಟಿ ರೂಪಾಯಿ
  • ಲಾರ್ಸೆನ್ ಮತ್ತು ಟೂಬ್ರೊ 150 ಕೋಟಿ ರೂಪಾಯಿ
  • ವಿಪ್ರೋ- ಅಜೀಮ್ ಪ್ರೇಮ್ ಜೀ 1125 ಕೋಟಿ ರೂಪಾಯಿ

ಹೀಗೆ ಪಿಎಂ ಕೇರ್ಸ್ ಫಂಡ್’ಗೆ ಜಮೆ ಆಗಿರುವ ಮೊತ್ತದಲ್ಲಿ ಉದ್ಯಮ ಸಂಸ್ಥೆಗಳದ್ದೇ ಹೆಚ್ಚು. ದೇಣಿಗೆ ಹಣ ಹರಿದು ಬರುತ್ತಲೇ ಇದ್ದು ಇನ್ನೆರಡು ದಿನಗಳಲ್ಲಿ ಈ ಮೊತ್ತ ದುಪ್ಪಟ್ಟಾಗುವ ನಿರೀಕ್ಷೆ ಇದೆ.

Related posts