ಕೊರೋನಾ ಲಸಿಕೆ ವಿತರಣೆಗೆ ಶನಿವಾರ ಪ್ರಧಾನಿ ಚಾಲನೆ

ದೆಹಲಿ: ಜಗತ್ತನ್ನೇ ತಲ್ಲಣ ಗೊಳಿಸಿರುವ ಕೊರೋನಾ ಹೆಮ್ಮಾರಿಯಿಂದ ಭಾರತ ಪಾರಾಗುವ ಆಶಾವಾದ ವ್ಯಕ್ತವಾಗುತ್ತಿದೆ. ಈ ವೈರಾಣು ಸೋಂಕಿನಿಂದ ರಕ್ಷಿಸಿಕೊಳ್ಳಲು ಔಷಧಿ ಸಿದ್ದವಾಗಿದ್ದು ಭಾರತದಲ್ಲಿ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್‌ಗೆ ಪ್ರಧಾನಿ ನರೇಂದ್ರ ಮೋದಿ ಜನವರಿ 16ರಂದು ಚಾಲನೆ ನೀಡಲಿದ್ದಾರೆ.

ಕೋವಿಡ್ ಲಸಿಕೆ ವಿತರಣೆಯ ಮೇಲ್ವಿಚಾರಣೆಗಾಗಿ ಕೋ-ವಿನ್ (ಕೋವಿಡ್ ಲಸಿಕೆ ಇಂಟೆಲಿಜೆನ್ಸ್ ನೆಟ್‌ವರ್ಕ್) ಆ್ಯಪ್’ನ್ನು ಮೋದಿ ಬಿಡುಗಡೆ ಮಾಡಿದ ನಂತರ ಈ ಲಸಿಕೆ ವಿತರಣಾ ಕಾರ್ಯಕ್ಕೆ ಚಾಲನೆ ಸಿಗಲಿದೆ ಎಂದು ಕೇಂದ್ರ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿದೆ.

ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್‌ನ ಮೊದಲ ದಿನ ದೇಶಾದ್ಯಂತ 2,934 ಕೇಂದ್ರಗಳಲ್ಲಿ ಸುಮಾರು ಮೂರು ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗುತ್ತದೆ. ಈ ಪೈಕಿ ಆಯ್ದ ಲಸಿಕೆ ವಿತರಣಾ ಕೇಂದ್ರಗಳಿಂದ ಫಲಾನುಭವಿಗಳ ಜೊತೆ ಪ್ರಧಾನಮಂತ್ರಿ ಸಂವಹನ ನಡೆಸಲಿದ್ದಾರೆಂದು ಹೇಳಲಾಗಿದೆ.

Related posts