ಪೊಳಲಿ ರಾಜರಾಜೇಶ್ವರಿ ದೇವಾಲಯ ಬಳಿ ಸ್ವಚ್ಛ ಭಾರತ್

ಮಂಗಳೂರು: ಗಾಂಧೀ ಜಯಂತಿ ದಿನವಾದ ಇಂದು ಮಂಗಳೂರು ಸಮೀಪದ ಪೊಳಲಿ ರಾಜರಾಜೇಶ್ವರಿ ದೇವಾಲಯ ಬಳಿ ಯುವಕರ ಸಮೂಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನಸೆಳೆದರು.

ಪುರಾಣ ಪ್ರಸಿದ್ಧ ಪೊಳಲಿ ಕ್ಷೇತ್ರ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛ ಭಾರತ್ ಅಭಿಯಾನ ಮೂಲಕ ಶುಚಿಗೊಳಿಸಲಾಯಿತು.
ಬಿಜೆಪಿ ಯುವಮೋರ್ಚಾ ಬಂಟ್ವಾಳ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ವಠಾರವನ್ನು ಸ್ವಚ್ಛಗೊಳಿಸಿದ ಕೈಂಕರ್ಯದಲ್ಲಿ ಗ್ರಾಮಸ್ಥರೂ ಸಾಥ್ ನೀಡಿದರು.

 

ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಚಂದ್ರವತಿ ಪೊಳಲಿ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಯುವಮೋರ್ಚಾ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ದಂಬೆದಾರು, ಜಿಲ್ಲಾ ಯುವಮೋರ್ಚಾ ಸದಸ್ಯರಾದ ಕಿಶೋರ್ ಪಲ್ಲಿಪ್ಪಾಡಿ ಸೇರಿದಂತೆ ಅನೇಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related posts