ಬೆಳಗಾವಿಯಲ್ಲಷ್ಟೇ ಅಲ್ಲ; ಕರಾವಳಿಯಲ್ಲೂ ಪೊಲೀಸ್-ಯೋಧ ಗಲಾಟೆ

ಉಡುಪಿ: ಕೊರೋನಾ ಸಂಕಟ ಕಾಲದಲ್ಲಿ ವೈರಾಣು ಹಾವಳಿ ನಿಯಂತ್ರಣ ಸಂಬಂಧ ಲಾಕ್’ಡೌನ್ ಜಾರಿಯಲ್ಲಿದೆ. ಈ ಲಾಕ್’ಡೌನ್ ಆದೇಶವನ್ನು ಜಾರಿಗೆ ತರುವುದು ಎಲ್ಲರ ಕರ್ತವ್ಯ. ಹಾಗಾಗಿಯೇ ಕೊರೋನಾ ವಿಚಾರದಲ್ಲಿ ದೇಶದ ಎಲ್ಲಾ ಜನರನ್ನೂ ಸೈನಿಕರೆಂದು ಪ್ರಧಾನಿಯವರೇ ಬಣ್ಣಿಸಿದ್ದಾರೆ. ಹೀಗಿರುವಾಗ ಲಾಕ್’ಡೌನ್ ವಿಚಾರ ರಜೆಯಲ್ಲಿರುವ ಸೈನಿಕರಿಗೂ ಅನ್ವಯಿಸುತ್ತದೆ. ಆದರೆ ಕೆಲವೆಡೆ ರಜೆಯಲ್ಲಿರುವ ಯೋಧರು ಕಿರಿಕ್’ಗೆ ಕಾರಣವಾಗುತ್ತಿರುವ ಸಂಗತಿ ಬೆಳಕಿಗೆ ಬರುತ್ತಿವೆ.

ಬೆಳಗಾವಿ ನಂತರ ಉಡುಪಿಯಲ್ಲೂ ಇಂತದ್ದೊಂದು ಸವಾಲು ಪೊಲೀಸರಿಗೆ ಎದುರಾಗಿದೆ. ಬೆಳಗಾವಿಯಲ್ಲಿ ಕೆಲ ದಿನಗಳ ಹಿಂದೆ ಪೊಲೀಸರ ಜೊತೆ ಹೀನಾಯವಾಗಿ ನಡೆದುಕೊಂಡ ಆರೋಪದಲ್ಲಿ ಯೋಧನೊಬ್ಬ ಬಂಧನಕ್ಕೊಳಗಾದ ವಿಚಾರ ಭಾರೀ ಸುದ್ದಿಯಾಗಿತ್ತು. ಆರಂಭದಲ್ಲಿ ಯೋಧನ ಮೇಲೆ ದೌರ್ಜನ್ಯ ನಡೆದಿದೆ ಎಂದೇ ಜನ ಭಾವಿಸಿದರಾದರೂ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ ನಂತರ ಚರ್ಚೆಗಳಿಗೆ ತೆರೆ ಬಿತ್ತು.

ಇದನ್ನೂ ಓದಿ.. ಡೋಂಟ್ ವರಿ.. ಜುಲೈ 31ರ ವರೆಗೂ ವರ್ಕ್ ಫ್ರಮ್ ಹೋಮ್

ಬೆಳಗಾವಿಯಲ್ಲಷ್ಟೇ ಅಲ್ಲ ಉಡುಪಿಯಲ್ಲೂ ಪೊಲೀಸ್ ವರ್ಸಸ್ ಸೇನೆಯ ಸನ್ನಿವೇಶ ಸೃಷ್ಟಿಯಾದ ಪ್ರಸಂಗ ನಡೆದಿದೆ. ಕೆಲವು ದಿನಗಳ ಹಿಂದಿನ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉಡುಪಿಯ ಎನ್.ಸಿ.ಸಿ. ಮೈದಾನದಲ್ಲಿ ಸೈನಿಕ ಮತ್ತು ಪೊಲೀಸ್ ನಡುವೆ ಘಟನೆ ನಡೆದಿದೆ ಎನ್ನಲಾದ ವೀಡಿಯೋವೊಂದು ವೈರಲ್ ಆಗಿದೆ.

ಲಾಕ್ ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಪೊಲೀಸರು ಟೊಂಕ ಕಟ್ಟಿ ನಿಂತಿದ್ದಾರೆ. ಇದೆ ವೇಳೆ ಆದಿ ಉಡುಪಿ ಹೆಲಿಪ್ಯಾಡ್’ನಲ್ಲಿ ಜನ ಗುಂಪು ಸೇರುವ ಹಾಗೂ ಆಡುವ ಸನ್ನಿವೇಶಗಳು ನಡೆಯುತ್ತಲಿದೆ ಎಂಬ ಬಗ್ಗೆ ಮಾಹಿತಿ ಪೊಲೀಸರಿಗೆ ಬಂದಿತ್ತು. ಈ ವಿಚಾರವಾಗಿ ಪ್ರಜ್ಞಾವಂತರು ಪೊಲೀಸರನ್ನು ಪ್ರಶ್ನಿಸಿದ್ದಾರೆನ್ನಲಾಗಿದೆ. ಇದರಿಂದ ಗಲಿಬಿಲಿಗೊಂಡ ಪೊಲೀಸರ ಸ್ಥಳಕ್ಕೆ ಧಾವಿಸಿದಾಗ ಆ ಮೈದಾನದಲ್ಲಿ ಯುವಕರ ಗುಂಪು ಆಟವಾಡುತ್ತಿದುದನ್ನು ಕಂಡು ಬುದ್ದಿ ಹೇಳಿದ್ದಾರೆ. ಹೆಲಿಪ್ಯಾಡ್ ಬಳಿಯ ರಕ್ಷಣಾ ಇಲಾಖೆಗೆ ಸೇರಿದ ಸ್ಥಳದಲ್ಲಿ ಸಂಜೆ ವೇಳೆ ಯೋಧರೆಂದು ಹೇಳಿಕೊಂಡು ವ್ಯಾಯಾಮ ಮಾಡುತ್ತಿದ್ದರೆನ್ನಲಾಗಿದೆ. ಆದರೆ ಇದು ಸರಿಯಲ್ಲ ಎಂದು ಮನವರಿಕೆ ಮಾಡಿದ ಪೊಲೀಸ್ ಅಧಿಕಾರಿ ಜೊತೆ ಯೋಧ ಎಂದು ಹೇಳಿಕೊಂಡ ವ್ಯಕ್ತಿ ವಾಗ್ವಾದಕ್ಕಿಳಿದಿದ್ದಾರೆ.

ಈ ಘಟನೆ ಹಲವು ದಿನಗಳ ಹಿಂದೆಯೇ ನಡೆದಿತ್ತು. ಆದರೆ ಇದೀಗ ಬೆಳಗಾವಿಯಲ್ಲಿ ಯೋಧನ ಬಂಧನ ಪ್ರಕರಣ ವಿವಾದಕ್ಕೊಳಗಾದ ಹಿನ್ನೆಲೆಯಲ್ಲಿ ಉಡುಪಿ ಪ್ರಕರಣದ ವೀಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಸುದ್ದಿಯಾಗಿದೆ.

ಇದನ್ನೂ ಓದಿ.. ಗಲ್ಫ್ ರಾಷ್ಟ್ರಗಳಲ್ಲಿ ಹಿಂದೂ ಉದ್ಯೋಗಿಗಳು ಟಾರ್ಗೆಟ್.. ಯಾಕಂತೀರಾ?

 

Related posts