ಪ್ಲಾಸ್ಮಾ ದಾನಕ್ಕೆ ಎಸಿಪಿ ಪ್ರೇರಣೆ; ದಾನಿಗಳ ಸಂಖ್ಯೆ ಹೆಚ್ಚಳಕ್ಕೆ ಡಿಜಿಪಿ ಸಂತಸ

ಬೆಂಗಳೂರು: ಕೊರೋನಾ ಇಲಾಖೆ ಕೂಡಾ ನಲುಗಿದೆ. ಅಂಕ ಪೊಲೀಸರೂ ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದಿದ್ದಾರೆ.

ಈ ನಡುವೆ ಕೊರೋನಾ ಸೋಂಕಿಗೊಳಗಾಗಿ ಗುಣಮುಖರಾದವರು ಇತರರ ಪಾಲಿಗೂ ಜೀವಸಂಜೀವಿನಿಯಾಗುತ್ತಿದ್ದಾರೆ. ಅದರಲ್ಲೂ ಪೊಲೀಸರನೇಕರು ಪ್ಲಾಸ್ಮಾ ದಾನ ಮಾಡಲು ಮುಂದೆ ಬರುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಎಸಿಪಿ ಸತೀಶ್ ಅವರು ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಪ್ಲಾಸ್ಮಾ ದಾನ ಮಾಡಿದ್ದರು. ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ ಇತರರಿಗೂ ಪ್ಲಾಸ್ಮಾ ದಾನ ಮಾಡಲು ಅವರು ಪ್ರೇರಣೆಯಾದರು.

ಇದೀಗ ಹಲವು ಪೊಲೀಸರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಇದೀಗ ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿದ್ದಾರೆ. ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ.. ಕೊರೋನಾ ವಿಚಾರ; ಸಂಜೀವಿನಿಯಾದ ಎಸಿಪಿಗೆ ನಾಡಿನ ಸೆಲ್ಯೂಟ್ 

 

Related posts