ವಾಯುಪಡೆ ಬತ್ತಳಿಕೆಗೆ ರಫೇಲ್ ಸೇರ್ಪಡೆ; ಭಾರತದ ರಕ್ಷಣಾ ಕ್ಷೇತ್ರಕ್ಕೆ ಭೀಮ ಬಲ

ದೆಹಲಿ: ದೇಶದ ರಕ್ಷಣಾ ಕ್ಷೇತ್ರಕ್ಕೆ ಭೀಮ ಬಲ ಬಂದಿದೆ. ಮಹತ್ವಾಕಾಂಕ್ಸೆಯ ರಫೇಲ್ ಯುದ್ಧ ವಿಮಾನ ಗುರುವಾರ ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ.

ಹರ್ಯಾಣ ಬಳಿಯ ಅಂಬಾಲಾ ವಾಯುನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಯುದ್ಧ ವಿಮಾನವನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ.

ಕಳೆದ ಜುಲೈ 27ರಂದು ಫ್ರಾನ್ಸ್ ನಿಂದ 5 ರಫೇಲ್ ಯುದ್ಧ ವಿಮಾನ ಹರ್ಯಾಣದ ಅಂಬಾಲಾದಲ್ಲಿರುವ ವಾಯುನೆಲೆಗೆ ಬಂದಿಳಿದಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ನ ಸೇನಾಪಡೆ ಸಚಿವ ಫ್ಲೋರೆನ್ಸ್ ಪರ್ಲಿ ಸಮ್ಮುಖದಲ್ಲಿ ಇದನ್ನು ವಾಯುಪಡೆಯ ಬತ್ತಳಿಕೆಗೆ ಸೇರಿಸಲಾಯಿತು. ಫ್ರಾನ್ಸ್ ನಲ್ಲಿ ತಯಾರಾದ ರಫೇಲ್ ಯುದ್ಧ ವಿಮಾನ ಇನ್ನು ಮುಂದೆ ವಾಯುಪಡೆಯ 17 ಸ್ಕ್ವಾಡ್ರನ್ ಗೋಲ್ಡನ್ ಆರ್ರೋಸ್ ನ ಭಾಗವಾಗಲಿದೆ.

Related posts