‘ರೈತರೊಂದಿಗೊಂದು ದಿನ’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಕರ್ಷಣೆ

ಬೆಂಗಳೂರು: ಕೃಷಿ ಸಚಿವರಾಗಿರುವ ಬಿ.ಸಿ.ಪಾಟೀಲ್ ಚಿತ್ರನಟ, ನಿರ್ದೇಶಕ, ನಿರ್ಮಾಪಕ ಕೂಡ ಹೌದು. ಹೀಗಾಗಿ ಬಿ.ಸಿ.ಪಾಟೀಲರೊಂದಿಗೆ ಚಿತ್ರರಂಗದ‌ ನಂಟು ಸಹಜವೇ. ಇದೀಗ ಬಿ.ಸಿ.ಪಾಟೀರು ಕೃಷಿಯಲ್ಲಿ ತರುತ್ತಿರುವ ನೂತನ ಬದಲಾವಣೆ ಹಾಗೂ ರೈತರ ಅಭಿವೃದ್ಧಿಗಿನ‌ ಚಿಂತನೆಗಳನ್ನು ಮೆಚ್ಚಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ , ಕೃಷಿ ಸಚಿವರು ರೂಪಿಸಿರುವ “ರೈತರೊಂದಿಗೊಂದು ದಿನ” ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ.

ನಟ ದರ್ಶನ್ ‘ರೈತರೊಂದಿಗೊಂದು ದಿನ’ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ಸದ್ಯದಲ್ಲಿಯೇ ದಿನಾಂಕ ಪ್ರಕಟಿಸಲಾಗುವುದು ಎಂದು ಕೃಷಿ ಸಚಿವರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

Related posts