ರಣಬೀರ್’ಗೆ ಮದುವೆಯಂತೆ.. ಲಕ್ಕಿ ವಧು ಯಾರು ಗೊತ್ತಾ?

ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಸದ್ಯದಲ್ಲೇ ಮದುವೆಯಾಗಲಿದ್ದಾರೇ. ಮುಂಬರುವ ವರ್ಷ ೨೦೨೧ ಇವರ ಪಾಲಿಗೆ ಒಳ್ಳೆಯ ವರ್ಷವಾಗಲಿದ್ದು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ. ಹಾಗಾದರೆ ರಣಬೀರ್ ಕಪೂರ್ ಅವರ ಕೈ ಹಿಡಿಯಲಿರುವ ಲಕ್ಕಿ ವಧು ಯಾರು ಗೊತ್ತಾ?

ರಂಬೀರ್ ಅವರ ಮನದನ್ನೆ ಆಲಿಯಾ ಭಟ್. ತಾವಿಬ್ಬರೂ ಬಹು ಕಾಲದಿಂದಲೂ ಪ್ರೇಮಿಸುತ್ತಿದ್ದು ಮುಂದಿನ ವರ್ಷದಲ್ಲಿ ವಿವಾಹವಾಗುವುದಾಗಿ ರಣಬೀರ್ ಹೇಳಿಕೊಂಡಿದ್ದಾರೆ.

ಬಾಲಿವುಡ್ ಸ್ಟಾರ್’ಗಳಾದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಡುವಿನ ಪ್ರೇಮ ಕಥಾನಕ ಬಗ್ಗೆ ಸಾರ್ವಜನಿಕವಲಯದಲ್ಲಿ ಸುದ್ದಿಗಳು ಹರಿದಾಡುತ್ತಿತ್ತಾದರೂ ಈ ಪ್ರೇಮ ಪಕ್ಷಿಗಳು ಅದನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ತಾವು ಪ್ರೇಮಿಗಳು ಎಂದು ಈ ಜೋಡಿ ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ.

ಪತ್ರಕರ್ತರು ನಡೆಸಿದ ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ ತಮ್ಮ ಪ್ರೀತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಸದ್ಯದಲ್ಲಿಯೇ ಮದುವೆಯಾಗುವುದಾಗಿಯೂ ಹೇಳಿಕೊಂಡಿದ್ದಾರೆ.

Related posts