‘ಕೋಟಿ’ ಕನಸುಗಳ ಸುತ್ತ ಕಾವೇರಿ ತವರಿನ ಕುವರಿ

ಕನ್ನಡತಿ ರಶ್ಮಿಕಾ ಮಂದಣ್ಣ ಇದೀಗ ಕರುನಾಡಿಗಿಂತ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ. ಅವರೀಗ ಭಾರಿ ಮೊತ್ತದ ಸಂಭಾವನೆ ವಿಚಾರದಿಂದಾಗಿ ಮತ್ತೆ ಸುದ್ದಿಯಾಗಿದ್ದಾರೆ.

ಕನ್ನಡದ ‘ಕಿರಿಕ್ ಪಾರ್ಟಿ’ ನಂತರ ತೆಲುಗಿನ ‘ಗೀತಾ ಗೋವಿಂದಂ’ ಚಿತ್ರದ ಮೂಲಕ ತೆಲುಗು ಸಿನಿಮಾ ರಂಗದಲ್ಲಿ ಅವರು ಬಲವಾಗಿ ಬೇರೂರಿದರು. ಈ ಸಿನಿಮಾ ನಂತರ ತೆಲುಗು ಚಿತ್ರರಂಗದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಲೇ ಸಾಗಿದ ಕೊಡಗಿನ ಕುವರಿ ರಶ್ಮಿಕಾ ಇದೀಗ ‘ಆಡಲ್ಲು ಮೀಕು ಜೋಹರ್ಲು’ ಚಿತ್ತ್ರ ಮೂಲಕ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.

ಕಿಶೋರ್ ತಿರುಮಲ ನಿರ್ದೇಶನದ ಈ ಚಿತ್ರಕ್ಕಾಗಿ ರಶ್ಮಿಕಾ ಒಂದು ಕೋಟಿಗೂ ಹೆಚ್ಚು ಮೊತ್ತದ ಸಂಭಾವನೆ ನಿರೀಕ್ಷಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ತಿರುಮಲದಲ್ಲಿ ಮುಹೂರ್ತ ಮುಗಿಸಿ ಸೆಟ್ಟೇರಿರುವ ಈ ಚಿತ್ರದಲ್ಲಿ ಶರ್ವಾನಂದ್ ಜೊತೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಳ್ಳಲಿದ್ದಾರೆ.

Related posts