ಬಾಲಿವುಡ್ ಅಂಗಳದಲ್ಲಿ ರಶ್ಮಿಕಾ ಕೌತುಕ

ಬಾಲಿವುಡ್​ನ ಗಾಯಕ ಹಾಗೂ ರ‍್ಯಾಪರ್​​ ಬಾದ್​ ಶಾ ಅವರ ಹೊಸ ಮ್ಯೂಸಿಕ್​ ಆಲ್ಬಂ ‘ಟಾಪ್​ ಟಕ್ಕರ್​’ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಮ್ಯೂಸಿಕ್​ ವಿಡಿಯೋ ವಿಶೇಷತೆ ಏನೆಂದರೆ ಬಹುಬಾಷಾ ತಾರೆ ರಶ್ಮಿಕಾ ಮಂದಣ್ಣ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋ ಸಾಂಗ್ ಸದ್ಯದಲ್ಲೇ ಯೂಟ್ಯೂಬ್​ನಲ್ಲಿ ರಿಲೀಸ್​ ಆಗಲಿದೆ.

ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾಗಿರುವ ಪೋಸ್ಟರ್​ನಲ್ಲಿ ರಶ್ಮಿಕಾ ಮಂದಣ್ಣ ಸಖತ್​ ಟ್ರೆಂಡಿಯಾಗಿ ಕಾಣಿಸಿಕೊಂಡಿದ್ದಾರೆ.
ರ‍್ಯಾಪರ್​​ ಬಾದ್​ ಶಾ ಅವರ ಹಿಂದಿನ ಆಲ್ಬಂಗಳು ಸೂಪರ್​ ಹಿಟ್​ ಆಗಿವೆ. ಈ ಹಿಂದೆ ಸೋನಮ್​ ಕಪೂರ್​, ಜಾಕ್ವೆಲಿನ್​ ನಂತಹ ಬಾಲಿವುಡ್​ ಹಾಟ್​ ನಾಯಕಿಯರು ಮ್ಯೂಸಿಕ್​ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಷಯವನ್ನು ರಶ್ಮಿಕಾ ಮಂದಣ್ಣ ಅವರು ತಮ್ಮ ಇನ್​ಸ್ಟಾ ಸ್ಟೋರೀಸ್’ನಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಈ ವೀಡಿಯೋ ಸಾಂಗ್ ಬಗ್ಗೆ ಕುತೂಹಲ ಉಂಟಾಗಿದೆ.

Related posts